ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಪಾರ್ಟ್ಮೆಂಟ್ ನಲ್ಲಿ ನೈತಿಕ ಪೊಲೀಸ್‌ಗಿರಿ - ಸಿಗರೇಟ್, ಗಾಂಜಾ ಅಂತ ಸೇದಿದ್ರೆ ಕಟ್ಟಬೇಕು ದಂಡ

ಬೆಂಗಳೂರು: ಹೊರವಲಯದ ಕುಂಬಳಗೂಡು ಸಮೀಪದ ಪ್ರಾವಿಡೆಂಟ್ ಸನ್ ಬರ್ತ್ ಅಪಾರ್ಟ್ಮೆಂಟ್‌ನಲ್ಲಿ ನೈತಿಕ ಪೊಲೀಸ್‌ಗಿರಿಯ ಅತಿರೇಕದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಅಪಾರ್ಟ್ಮೆಂಟ್ ಅಸೋಸಿಯೇಷನ್ ಮತ್ತು ಭದ್ರತಾ ಏಜೆನ್ಸಿಗಳು ತಮ್ಮದೇ ಆದ ಕಾನೂನುಗಳನ್ನು ರೂಪಿಸಿಕೊಂಡು, ನಿವಾಸಿಗಳ ಮೇಲೆ ಲಕ್ಷಾಂತರ ರೂಪಾಯಿ ದಂಡ ವಿಧಿಸುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮದೇ ಆದ ಕಾನೂನುಗಳನ್ನು ರೂಪಿಸಿಕೊಂಡು, ಸರ್ಕಾರಿ ನ್ಯಾಯಾಲಯಗಳ ಅಧಿಕಾರವನ್ನು ಬದಿಗೆ ಸರಿಸಿ, ತಮ್ಮದೇ ಆದ ನ್ಯಾಯದಾನ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಅಪಾರ್ಟ್ಮೆಂಟ್ ಆವರಣದಲ್ಲಿ ಸಿಗರೇಟ್ ಸೇದಿದರೆ 10 ಸಾವಿರ ರೂ., ಗಾಂಜಾ ಸೇದಿದರೆ 30 ಸಾವಿರ ರೂ., ಮತ್ತು ಮದ್ಯ ಸೇವಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈ ದಂಡಗಳನ್ನು ಅಪಾರ್ಟ್ಮೆಂಟ್‌ನ ನೆಲಮಾಳಿಗೆಯಲ್ಲೇ ರಾಜಿ ಪಂಚಾಯಿತಿ ನಡೆಸಿ ವಸೂಲಿ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ, ದಂಡಕ್ಕೆ ಒಳಗಾದವರು ನ್ಯಾಯಾಲಯಕ್ಕೆ ಹೋಗುವ ಹಾಗಿಲ್ಲ, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಇದು ಅಪಾರ್ಟ್ಮೆಂಟ್ ನಿವಾಸಿಗಳದ್ದೇ ಕಾನೂನು ಎನ್ನುವಂತೆ ವರ್ತಿಸಲಾಗುತ್ತಿತ್ತು.

ಈ ವಿಚಿತ್ರ ನಿಯಮಗಳು ಮತ್ತು ದಂಡ ವಸೂಲಿ ಬಗ್ಗೆ ಪೊಲೀಸರಿಗೆ ಆರಂಭದಲ್ಲಿ ಮಾಹಿತಿ ಇರಲಿಲ್ಲ ಅಥವಾ ಅವರು ಕಣ್ಮುಚ್ಚಿ ಕುಳಿತಿದ್ದರು ಎಂಬ ಆರೋಪವೂ ಇದೆ. ಮನೆ ಮನೆಗೆ ಪೊಲೀಸ್ ಎಂಬ ಪರಿಕಲ್ಪನೆ ಅಪಾರ್ಟ್ಮೆಂಟ್‌ಗಳಿಗೆ ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಕೆಲವರು ಅನಾಮಧೇಯ ಪತ್ರ ಬರೆದು ಸಂತ್ರಸ್ತರಾಗಿ ತಮ್ಮ ಅಳಲನ್ನು ತೋಡಿಕೊಂಡ ನಂತರ, ಕುಂಬಳಗೂಡು ಪೊಲೀಸರು ಎಚ್ಚೆತ್ತಿದ್ದಾರೆ. ಸದ್ಯ, ಈ ಅರ್ಜಿಯನ್ನು ಪರಿಶೀಲಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಅಪಾರ್ಟ್ಮೆಂಟ್ ಅಸೋಸಿಯೇಷನ್ ಮತ್ತು ಭದ್ರತಾ ಏಜೆನ್ಸಿ ವಿರುದ್ಧ ಕುಂಬಳಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Edited By : Vijay Kumar
Kshetra Samachara

Kshetra Samachara

17/12/2025 06:37 pm

Cinque Terre

460

Cinque Terre

0

ಸಂಬಂಧಿತ ಸುದ್ದಿ