ಬೆಂಗಳೂರು ಜಲಮಂಡಳಿಯ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯಲ್ಲಿ ಉಂಟಾಗಿದ್ದ ಭಾರೀ ಸೋರಿಕೆಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ಸರಿಪಡಿಸಿದ್ದಾರೆ. ಟಿ.ಕೆ. ಹಳ್ಳಿಯಿಂದ 5.2 ಕಿ.ಮೀ ದೂರದ ಗುಂಡಾಪುರದಲ್ಲಿ 3000 ಎಂಎಂ ವ್ಯಾಸದ ಬೃಹತ್ ಪೈಪ್‌ಲೈನ್‌ನ ಸ್ಕವರ್ ವಾಲ್ವ್‌ನಲ್ಲಿ ಸೋರಿಕೆ ಕಾಣಿಸಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 17ರ ಬೆಳಿಗ್ಗೆ 7:30 ರಿಂದ 18 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತಗೊಳಿಸಿ, ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಹಾನಿಗೊಳಗಾಗಿದ್ದ ಗ್ಯಾಸ್ಕೆಟ್ ಹಾಗೂ ನಟ್ ಮತ್ತು ಬೋಲ್ಟ್‌ಗಳನ್ನು ಬದಲಾಯಿಸುವುದರ ಜೊತೆಗೆ 900 ಎಂಎಂ ಬಟರ್‌ಫ್ಲೈ ವಾಲ್ವ್‌ನ ಸೋರಿಕೆಯನ್ನೂ ಸಹ ಸರಿಪಡಿಸಲಾಗಿದೆ. ಡಿಸೆಂಬರ್ 18ರ ಬೆಳಗಿನ ಜಾವ 2:00 ಗಂಟೆಗೆ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಪ್ರಸ್ತುತ 3 ಪಂಪ್‌ಗಳು ಕಾರ್ಯಾರಂಭ ಮಾಡಿವೆ. ನಗರಕ್ಕೆ ನೀರು ಸರಬರಾಜು ಪುನರಾರಂಭಗೊಂಡಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
Kshetra Samachara
18/12/2025 03:45 pm
LOADING...