ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ ಹಣ ಹಾಕದೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದನಕ್ಕೆ ಸುಳ್ಳು ಹೇಳಿದ್ದಾರೆಂದು ಆರೋಪಿಸಿ ಬಿಜೆಪಿ ನಡೆಸಿದ್ದ ಗದ್ದಲ- ಕೋಲಾಹಲಕ್ಕೆ ಮಣಿದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೊನೆಗೂ ಸದನದ ಕ್ಷಮೆಯಾಚಿಸಿದರು.
ಪ್ರತಿಪಕ್ಷ ನಾಯಕ ಸೇರಿದಂತೆ ಬಿಜೆಪಿಯ ಶಾಸಕ ಎಸ್.ಸುರೇಶ್ ಕುಮಾರ್, ಸುನೀಲ್ ಕುಮಾರ್ ಅವರು ಮಾತನಾಡಿ, ಸದನದ ಗೌರವ ಉಳಿಯಬೇಕಾದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕ್ಷಮೆ ಕೇಳಲೇಬೇಕೆಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು, ಸಚಿವರು ಈಗಾಗಲೇ ವಿಷಾಧ ವ್ಯಕ್ತಪಡಿಸಿದ್ದಾರೆ. ಇದನ್ನು ಇಲ್ಲಿಗೇ ಬಿಟ್ಟು ಮುಂದಕ್ಕೆ ಹೋಗೋಣ ಎಂದು ಶಾಸಕರಲ್ಲಿ ಅರಿಕೆ ಮಾಡಿಕೊಂಡರೂ ಬಿಜೆಪಿಯ ಸದಸ್ಯರು ಕೇಳದಾದಾಗ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ ಮಹಿಳೆಯರಿಗಾಗಿ ನಮ್ಮ ಸರ್ಕಾರ ಇದುವರೆಗೆ 52 ಸಾವಿರ ಕೋಟಿ ಹಣವನ್ನು ಹಾಕಿದೆ. ಎರಡು ತಿಂಗಳ ಗೃಹಲಕ್ಷ್ಮೀ ಹಣ ಹಾಕಿಲ್ಲ. ಅಚಾತುರ್ಯದಿಂದ ನೀಡಲಾದ ನನ್ನ ಹೇಳಿಕೆಗಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದರು. ಅಲ್ಲಿಗೆ ವಿವಾದ ತಣ್ಣಗಾಯಿತು.
PublicNext
18/12/2025 01:16 pm
LOADING...