ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿ ರಿಪೋರ್ಟ್ ರಿಜೆಕ್ಟ್ ಆದರೆ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ!!

ಬೆಂಗಳೂರು: 'ಮುಡಾ' ಪ್ರಕರಣ ಹಿನ್ನೆಲೆ ಲೋಕಾಯುಕ್ತ ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಿದ್ದು, ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ಮಹತ್ವದ ದಿನವಾಗಿದೆ! ಈಗಾಗಲೇ ಲೋಕಾಯುಕ್ತವು ಸಲ್ಲಿಸಿದ ಬಿ ರಿಪೋರ್ಟ್ ಅನ್ನೇ ಕೋರ್ಟ್ ಎತ್ತಿ ಹಿಡಿದರೆ ಸಿಎಂ ಅವರು ಸಂಕಷ್ಟದಿಂದ ಪಾರಾಗಬಹುದು. ಒಂದು ವೇಳೆ, ಬಿ-ರಿಪೋರ್ಟ್ ರಿಜೆಕ್ಟ್ ಆದರೆ ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ಕಂಟಕ ಎದುರಾಗೋದು ಗ್ಯಾರಂಟಿ ಎಂದೇ ಹೇಳಲಾಗುತ್ತೆ. ಈ ಸಂದರ್ಭದಲ್ಲಿ ರಾಜ್ಯದ ಗಮನವನ್ನು ಸೆಳೆದಿರುವ ಮುಡಾ ಕೇಸ್ ನ ದೂರುದಾರ ಸ್ನೇಹಮಯಿ ಕೃಷ್ಣ ಅವರೊಂದಿಗೆ "ಪಬ್ಲಿಕ್ ನೆಕ್ಸ್ಟ್" ಮಾತನಾಡಿದ್ದು, ಅಂತಿಮವಾಗಿ ತಮಗೆ ಜಯ ಲಭಿಸಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Edited By : Somashekar
PublicNext

PublicNext

18/12/2025 02:32 pm

Cinque Terre

6.58 K

Cinque Terre

0

ಸಂಬಂಧಿತ ಸುದ್ದಿ