ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಅಣ್ಣನ ಕೆಲಸ ಮಾಡಿ, ನಿಮ್ಮ ಕ್ಷೇತ್ರದ್ದು ಮಾಡಲ್ವಾ! - ಪ್ರಿಯಾಂಕಾಗೆ ಗಡ್ಕರಿ ತಮಾಷೆ

ನವದೆಹಲಿ: ಕೇರಳದ ಆರು ರಸ್ತೆ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ವಯನಾಡ್ ಸಂಸದೆ ಪ್ರಿಯಾಂಕಾ ವಾದ್ರಾ ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಭೇಟಿಯ ವೇಳೆ, ಕೆಲವು ರಸ್ತೆ ಯೋಜನೆಗಳು ಕೇರಳ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದರು. ಆದರೆ, ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಯೋಜನೆಗಳನ್ನು ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದರು.

ಮಾತುಕತೆಯ ಮಧ್ಯೆ, ಗಡ್ಕರಿ ಅವರು ಇತ್ತೀಚೆಗೆ ಪ್ರಿಯಾಂಕಾ ಸಹೋದರ ರಾಹುಲ್ ಗಾಂಧಿ ತಮ್ಮ ರಾಯ್‌ಬರೇಲಿ ಕ್ಷೇತ್ರದ ರಸ್ತೆಗಳ ಬಗ್ಗೆ ಭೇಟಿ ನೀಡಿದ ವಿಚಾರವನ್ನು ಪ್ರಸ್ತಾಪಿಸಿ, "ನಿಮ್ಮ ಸಹೋದರನ ಕೆಲಸಗಳನ್ನು ಮಾಡಿ ನಿಮ್ಮ ಕ್ಷೇತ್ರದ ಕೆಲಸಗಳನ್ನು ಮಾಡಿಲ್ಲ ಎಂದರೆ ದೂರುತ್ತೀರಿ ಅಲ್ವಾ?" ಎಂದು ತಮಾಷೆ ಮಾಡಿದರು. ಗಡ್ಕರಿ ಅವರ ಈ ಹಾಸ್ಯಭರಿತ ಮಾತಿಗೆ ಅಲ್ಲಿದ್ದವರೆಲ್ಲರೂ ನಗೆಗಡಲಲ್ಲಿ ತೇಲಿದರು.

ಗಡ್ಕರಿ ಅವರ ಕಾಲೆಳತಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ವಾದ್ರಾ, ಎಡಪಂಥೀಯ ಸರ್ಕಾರದ ವ್ಯಾಪ್ತಿಯಲ್ಲಿರುವ ಕೇರಳಕ್ಕೆ ಸಂಬಂಧಿಸಿದ ತಮ್ಮ ಪ್ರಸ್ತಾವನೆಗಳನ್ನು ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಕ್ಷಿಪ್ತ ಭೇಟಿಯ ವೇಳೆ, ಪ್ರಿಯಾಂಕಾ ವಾದ್ರಾ ಅವರು ತಾವು ಯೂಟ್ಯೂಬ್ ನೋಡಿ ತಯಾರಿಸಿದ್ದ ಅಕ್ಕಿ ಉಂಡೆಯನ್ನು ದೀಪೇಂದರ್ ಸಿಂಗ್ ಹೂಡಾ ಅವರಿಗೆ ಸವಿಯಲು ಕೇಳಿಕೊಂಡರು. ಆದರೆ, ಗಡ್ಕರಿ ಅವರ ಆಹ್ವಾನದ ಮೇರೆಗೆ ಪ್ರಿಯಾಂಕಾ ವಾದ್ರಾ ತಾವೇ ಆ ತಿಂಡಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

Edited By : Nirmala Aralikatti
PublicNext

PublicNext

18/12/2025 08:11 pm

Cinque Terre

9.33 K

Cinque Terre

0

ಸಂಬಂಧಿತ ಸುದ್ದಿ