ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಮಹೇಶ್ವರಸ್ವಾಮಿ ಜಾತ್ರೆ, ಗಂಡಸರೇ ಸೇರಿ ಆಚರಿಸುವ ಜಾತ್ರೆ, ಹೆಂಗಸರಿಗಿಲ್ಲ ಪ್ರವೇಶ

ದಾವಣಗೆರೆ : ಕೇವಲ ಗಂಡಸರೇ ಸೇರಿ ಆಚರಿಸುವ ಜಾತ್ರಾ ಮಹೋತ್ಸವ. ಈ ಜಾತ್ರಾ ಮಹೋತ್ಸವದಲ್ಲಿ ಅಪ್ಪಿತಪ್ಪಿಯೂ ಹೆಂಗಸರು ಪಾಲ್ಗೊಳ್ಳುವುದಿಲ್ಲ. ಪೂಜೆಯಿಂದ ಹಿಡಿದು ಅಡುಗೆ ಮಾಡಿ ಬಡಿಸುವವರೆಗೂ ಎಲ್ಲವನ್ನೂ ಗಂಡಸರೇ ಇಲ್ಲಿ ಮಾಡ್ತಾರೆ. ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯಲಿದ್ದು ಇದನ್ನ ಗಂಡಸರ ಜಾತ್ರೆ ಎಂದು ಕರೆಯುತ್ತಾರೆ.

ಎಲ್ಲಿ ನೋಡಿದರಲ್ಲಿ ಕಾಣುತ್ತಿರುವ ಪುರುಷರು, ಸಾಮೂಹಿಕವಾಗಿ ಅನ್ನ,ಬೆಲ್ಲ,ಬಾಳೆಹಣ್ಣು, ಸಾಂಬಾರು ಸೇವಿಸುತ್ತಿರುವ ಭಕ್ತರು, ಈ ದೃಶ್ಯ ಕಂಡು ಬಂದಿದ್ದು ದಾವಣಗೆರೆ ತಾಲೂಕಿನ ಬಸಾಪುರ ಗ್ರಾಮದಲ್ಲಿ. ಗ್ರಾಮದಲ್ಲಿ ಮಹೇಶ್ವರಸ್ವಾಮಿಯ ಪುಣ್ಯಕ್ಷೇತ್ರ ಇದ್ದು ಮಹೇಶ್ವರ ಸ್ವಾಮಿ ಜಾತ್ರೆಯನ್ನ ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಎರಡು ದಿನ ಮಹೇಶ್ವರ ಸ್ವಾಮಿಯ ಜಾತ್ರೆ ನಡೆಯಲಿದೆ. ಮಹೇಶ್ವರ ಸ್ವಾಮಿಯು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಲಗೆರೆ ಗ್ರಾಮದಲ್ಲಿ ನೆಲೆಸಿದ್ದು, ಬಳಿಕ ಸ್ವಾಮಿ ಯಾವುದೋ ಕಾರಣಕ್ಕೆ ಬಸಾಪುರ ಗ್ರಾಮಕ್ಕೆ ಬಂದು ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ.

ಈ ಜಾತ್ರೆಯನ್ನ ಪುರುಷರೇ ಸೇರಿಕೊಂಡು ಮಾಡುವುದರಿಂದ ಇದನ್ನ ಗಂಡಸರ ಜಾತ್ರೆ ಎಂದು ಕರೆಯುತ್ತಾರೆ. ಈ ಮಹೇಶ್ವರ ಸ್ವಾಮಿ ಜಾತ್ರೆಯಲ್ಲಿ ಭಕ್ತರು ಸಾಮೂಹಿಕವಾಗಿ ಕುಳಿತು ಪ್ರಸಾದ ಸೇವಿಸುವುದು ಇಲ್ಲಿನ ವಿಶೇಷವಾಗಿದೆ.

Edited By : Vinayak Patil
PublicNext

PublicNext

18/12/2025 08:21 pm

Cinque Terre

5.48 K

Cinque Terre

0