ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜೈಲಿನಿಂದ ಹೊರ ಬರುತ್ತಲೇ ಜೀವ ಬೆದರಿಕೆ ದೂರು ದಾಖಲಿಸಿದ ಚಿನ್ನಯ್ಯ

ಮಂಗಳೂರು: ಶಿವಮೊಗ್ಗ ಜೈಲಿನಿಂದ ಹೊರಬರುತ್ತಿದ್ದಂತೆ ಚಿನ್ನಯ್ಯ ತನಗೆ ಜೀವ ಬೆದರಿಕೆ ಇದೆ ಎಂದು ಐವರ ವಿರುದ್ಧ ದೂರು ದಾಖಲಿಸಿದ್ದಾನೆ ಎನ್ನಲಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್, ಸಮೀರ್ ಎಂ.ಡಿ. ಎಂಬವರ ವಿರುದ್ಧ ಜೀವ ಬೆದರಿಕೆ ದೂರು ದಾಖಲು ಮಾಡಿದ್ದಾನೆ.

ಜೈಲಿನಿಂದ ಹೊರ ಬಂದ ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿ ತನಗೆ ಮತ್ತು ತನ್ನ ಪತ್ನಿಗೆ ಜೀವ ಬೆದರಿಕೆ ಇದೆಯೆಂದು ದೂರು ದಾಖಲಿಸಿದ್ದಾನೆ. ಈ ಐವರಿಂದ ಮುಂದೆ ಜೀವ ಬೆದರಿಕೆ ಬರಬಹುದು. ಆದ್ದರಿಂದ ತನಗೆ ಹಾಗೂ ತನ್ನ ಪತ್ನಿಗೆ ರಕ್ಷಣೆ ನೀಡಬೇಕಾಗಿ ದೂರು ಅರ್ಜಿ ಸಲ್ಲಿಸಿದ್ದಾನೆ. ಆದರೆ ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ಸಲ್ಲಿಸಲು ಧರ್ಮಸ್ಥಳ ಪೊಲೀಸರು ಸೂಚನೆ ನೀಡಿದ್ದಾರೆ.

ಅದರಂತೆ ಚಿನ್ನಯ್ಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ PO1070250601253 ರಂತೆ ದೂರು ಅರ್ಜಿ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

20/12/2025 12:19 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ