ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊಲಕಾಡಿ ಶಾಲೆಯ ನೂತನ ಆರ್ಟ್ ಗ್ಯಾಲರಿ ʼಜಾಗೃತಿʼ ಉದ್ಘಾಟನೆ

ಮುಲ್ಕಿ: ಕೊಲಕಾಡಿ ಹಿರಿಯ ಪ್ರಾಥಮಿಕ ಶಾಲೆ, ಅನುದಾನಿತ ಕೆಪಿಎಸ್‌ಕೆ ಸ್ಮಾರಕ ಪ್ರೌಢಶಾಲೆಯಲ್ಲಿ ಎಂಆರ್ ಪಿಎಲ್ ನ ಸಿಎಸ್ಆರ್ ಅನುದಾನದ ನೂತನ ಆರ್ಟ್ ಗ್ಯಾಲರಿ "ಜಾಗೃತಿ" ಉದ್ಘಾಟನೆ ಹಾಗೂ 2024 - 25 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಡಿ. 20ರ ಶನಿವಾರ ಕೆಪಿಎಸ್‌ಕೆ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ನೂತನ ಆರ್ಟ್ ಗ್ಯಾಲರಿ "ಜಾಗೃತಿ" ಯನ್ನು ಎಂ ಆರ್ ಪಿ ಎಲ್ ಎಚ್. ಆರ್. ಏರೋಮ್ಯಾಟಿಕ್ಸ್ ನ ಪ್ರಬಂಧಕ

ಶ್ರೀಶ ಎಂ. ಕರ್ಮಾರನ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆ ಪರಿಸರ ಸಂರಕ್ಷಣೆ ಸಹಿತ ಅನೇಕ ಸಾಮಾಜಿಕ ಕಾರ್ಯಕ್ರಮಗಳ ಜಾಗೃತಿ ಮೂಡಿಸುವ ವಿದ್ಯಾಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢ ಶಾಲೆಯ ಸಂಚಾಲಕ ಗಂಗಾಧರ ಶೆಟ್ಟಿ ಬರ್ಕೆ ವಹಿಸಿದ್ದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವೆಂಕಿ ಫಲಿಮಾರು ಮಾತನಾಡಿ, ಸಮಾಜದಲ್ಲಿ ಮದ್ಯಪಾನ, ಪರಿಸರ ಜಾಗೃತಿ, ಪ್ರಾಣಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದಲೇ ತಯಾರಿಸಲಾದ ಕಲಾ ಕುಂಚದ ವಸ್ತುಗಳನ್ನು ಆರ್ಟ್ ಗ್ಯಾಲರಿಯಲ್ಲಿ ಜೋಡಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮುಲ್ಕಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಜೊತೆ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹದ ಮೂಲಕ ಮೌಲ್ಯಾಧಾರಿತ ಶಿಕ್ಷಣ ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಕಾರ್ಕಳ ಬೈಲೂರು ಹೊಸ ಬೆಳಕು ಆಶ್ರಮದ ನಿರ್ದೇಶಕ ತನುಲಾ ತರುಣ್, ಪ್ರಾಥಮಿಕ ಶಾಲೆಯ ಸಂಚಾಲಕ ಶಾಂತಿ ಮನೋಹರ ಕಾಮತ್, ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್,ನಿವೃತ್ತ ಶಿಕ್ಷಕ ಶಂಕರ್ ಮಾಸ್ಟರ್ ,ಕೊಲಕಾಡಿ ವಿದ್ಯಾ ಪ್ರಚಾರಿಣಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಶೆಟ್ಟಿ, ಕಾರ್ಯದರ್ಶಿ ನಿತಿನ್ ಪ್ರಕಾಶ್,ಪ್ರೌಢ ಶ್ರೀಮಂತ ಕಾಮತ್, ದಿನೇಶ್ಚಂದ್ರ ಅಜಿಲ,ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾ ಪ್ರಚಾರಿಣಿ ಸಂಘದ ಕಾರ್ಯದರ್ಶಿ ನಾಗಭೂಷಣ ರಾವ್ ಸ್ವಾಗತಿಸಿದರು. ಶಿಕ್ಷಕ ಶಿವಪ್ರಸಾದ್ ನಿರೂಪಿಸಿದರು.

Edited By :
PublicNext

PublicNext

20/12/2025 08:36 pm

Cinque Terre

5.84 K

Cinque Terre

0

ಸಂಬಂಧಿತ ಸುದ್ದಿ