ಬ್ರಹ್ಮಾವರ: ಚಾಂತಾರು ನಂದಿಗುಡ್ಡೆಯಲ್ಲಿರುವ ಭಗವಾನ್ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಸ್ಥಾನದಲ್ಲಿ ವಾರ್ಷಿಕ ಹರಕೆಪೂಜೆ ವಿಜೃಂಭಣೆಯಿಂದ ಜರುಗಿತು.
ಶನಿವಾರ ನಡೆದ ಈ ವಾರ್ಷಿಕ ಹರಕೆಪೂಜೆಯಲ್ಲಿ ಅರ್ಚಕರಾದ ಆನಂದ ಮತ್ತು ಸುಧಾಕರ ನೇತೃತ್ವದಲ್ಲಿ ಪಂಚಮುಖಿ ನಾಗದೇವರಿಗೆ ತನು ಸೇವೆ ಸಲ್ಲಿಸಲಾಯಿತು. ಇದೇ ವೇಳೆ, ಬಬ್ಬುಸ್ವಾಮಿ ಮತ್ತು ಪರಿವಾರ ದೇವರಿಗೆ ನಾನಾ ಪೂಜಾ ಕೈಂಕರ್ಯಗಳು ಭಕ್ತಿಪೂರ್ವಕವಾಗಿ ನೆರವೇರಿದವು.
ದೇವಸ್ಥಾನದ ಆಡಳಿತ ಮೋಕ್ತೇಸರ ವಿಶ್ವನಾಥ ಶೆಟ್ಟಿ, ವ್ಯವಸ್ಥಾಪಕ ಐತಪ್ಪ ಶೆಟ್ಟಿಗಾರ್, ಮೋಕ್ತೇಸರ ತಾರಾನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಚಂದ್ರಶೇಖರ ಕಿಣಿ, ಖಜಾಂಚಿ ಉದಯ ಮತ್ತು ಗಿರಿಕಾರ ಅಪ್ಪು ಮೇಸ್ತ್ರಿ ಸೇರಿದಂತೆ ಹಲವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಗಣ್ಯರು ಪೂಜೆಯಲ್ಲಿ ಮತ್ತು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಶನಿವಾರ ಸಂಜೆ ದೀಪಾರಾಧನೆ ಮತ್ತು ಭಜನೆ ಕಾರ್ಯಕ್ರಮಗಳು ನಡೆದವು. ಭಾನುವಾರ ಕ್ಷೇತ್ರದ ಬಾಳಬಂಡಾರದೊಂದಿಗೆ ಬಲಿ ಸೇವೆ ನೆರವೇರಲಿದೆ. ಇದರ ಬಳಿಕ ಕ್ಷೇತ್ರದ ಪ್ರಮುಖ ದೈವಗಳಾದ ಪರಬ್ರಹ್ಮ ಕಂಬಿಗಾರ, ಬಬ್ಬುಸ್ವಾಮಿ, ತನ್ನಿಮಾನಿಗ, ಜುಮಾದಿ, ಗುಳಿಗ ಬೇಟೆಗಾರ, ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ದೈವಗಳ ದರ್ಶನ ಸೇವೆ ಜರುಗಲಿದೆ.
PublicNext
21/12/2025 11:52 am
LOADING...