ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಈ ಹಾಲುಗೆನ್ನೆಯ ಮಗುವಿಗಿದೆ ಅಸಾಮಾನ್ಯ ನೆನಪಿನ ಶಕ್ತಿ - ಕೇವಲ ಒಂದೂವರೆ ವರ್ಷಕ್ಕೇ ಮೂರು ರೆಕಾರ್ಡ್ ದಾಖಲೆ

ಮಂಗಳೂರು: ಈ ಮುದ್ದಾದ ಮಗುವಿಗೆ ವಯಸ್ಸು 1ವರ್ಷ 10ತಿಂಗಳಷ್ಟೇ. ಈ ಮಗು ಕೇವಲ 1ವರ್ಷ 8ತಿಂಗಳಿಗೇ ಮೂರು ರೆಕಾರ್ಡ್ ದಾಖಲಿಸಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಈ ವಯಸ್ಸಿಗೆ ಕೆಲವೊಂದು ಮಕ್ಕಳು ಇನ್ನೂ ತೊದಲು ನುಡಿಯಲ್ಲೂ ಮಾತನಾಡುವುದಿಲ್ಲ. ಆದರೆ ಈ ಮಗು ತನ್ನ ಅದ್ಭುತ ನೆನಪಿನ ಶಕ್ತಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೆಕಾರ್ಡ್ ಮಾಡಿದೆ.

ಅಶೋಕ ನಗರ ನಿವಾಸಿಗಳಾದ ಮಹಮ್ಮದ್ ತಂಝೀಲ್ ಮತ್ತು ತಾಯಿ ಮೆಹ್ರೋಝ್ ದಂಪತಿಗಳ ಪುತ್ರ ಝೋಹನ್ ಓಝಿಲ್ ಅಸಾಧಾರಣ ನೆನಪಿನ ಶಕ್ತಿಯುಳ್ಳ ಮಗು. ಒಂದು ಸಲ ಯಾವುದಾದರೂ ವಿಷಯವನ್ನು ಹೇಳಿದರೆ ಅದನ್ನು ನೆನಪಿನಲ್ಲಿಟ್ಟುಕೊಂಡು ಮತ್ತೆ ಪುನರುಚ್ಚರಿಸುತ್ತಿತ್ತು. 1ವರ್ಷ 2ತಿಂಗಳು ಇರುವಾಗಲೇ ಮಗುವಿನ ಈ ಚಾತುರ್ಯವನ್ನು ಹೆತ್ತವರು ಗಮನಿಸಿದ್ದರು. ಆದ್ದರಿಂದ ಇನ್ನೇನಾದರೂ ವಿಶೇಷ ರೀತಿಯಲ್ಲಿ ಮಗುವಿಗೆ ತರಬೇತು ಕೊಡುವ ನಿಟ್ಟಿನಲ್ಲಿ ಒಂದಷ್ಟು ವೈವಿಧ್ಯಮಯ ವಿಚಾರವುಳ್ಳ ಫ್ಲ್ಯಾಶ್ ಕಾರ್ಡ್‌ಗಳು, ಪುಸ್ತಕಗಳನ್ನು ತಂದು ಕೊಟ್ಟರು.

ಹೀಗೆ ಫ್ಲ್ಯಾಶ್ ಕಾರ್ಡ್‌ನಲ್ಲಿರುವ ಚಿತ್ರಗಳನ್ನು ಗಮನಿಸುತ್ತಾ ಝೋಹನ್ ಓಝಿಲ್ ವಿವಿಧ ದೇಶಗಳು, ಪ್ಲ್ಯಾನೆಟ್‌ಗಳು, ವಿಶ್ವದ ಅದ್ಭುತಗಳು, ವೃತ್ತಿಪರ ವ್ಯಕ್ತಿಗಳು, ಪ್ರಕೃತಿ ಚಿತ್ರಗಳು, ಹಿಂದಿ, ಇಂಗ್ಲಿಷ್ ಅಕ್ಷರ ಮಾಲೆಗಳನ್ನು ಗುರುತಿಸಲು ತೊಡಗಿದ್ದಾನೆ. ಪ್ರಧಾನಿ ಮೋದಿ ಸೇರಿದಂತೆ ಕೆಲ ವ್ಯಕ್ತಿಗಳನ್ನು ಗುರುತಿಸಲು ತೊಡಗಿದೆ ಈ ಮಗು. ಈ ಪ್ರತಿಭೆಯನ್ನು ಗಮನಿಸಿದ ತಾಯಿ ಮೆಹ್ರೋಝ್ ಮೊದಲಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಮಗುವಿನ ಅಸಾಧಾರಣ ನೆನಪಿನ ಶಕ್ತಿಯ ವೀಡಿಯೋ ಮಾಡಿ ಕಳುಹಿಸಿದ್ದಾರೆ. ತನ್ನ ಅಸಾಧಾರಣ ಪ್ರತಿಭೆಯಿಂದ ಝೋಹನ್ ಓಝಿಲ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿದ್ದಾನೆ.

ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “Super Talented Kid – One in a Million” ಮತ್ತು ವಿಶೇಷವಾಗಿ ಪ್ರತಿಷ್ಠಿತ ನೋಬೆಲ್ ವರ್ಲ್ಡ್ ರೆಕಾರ್ಡ್ ಅನ್ನು ಪಡೆದ ಝೋಹನ್ ಅಪರೂಪದ ಸಾಧನೆ ಮಾಡಿದ್ದಾರೆ. ಈ ಮಗುವಿನ ಈ ಸಾಧನೆ ಹೆತ್ತವರಿಗೆ ಮಾತ್ರವಲ್ಲದೆ ಮಂಗಳೂರಿಗೆ ಹೆಮ್ಮೆಯನ್ನು ತಂದಿದೆ. ಈ ಮಗು ಇನ್ನಷ್ಟು ಸಾಧನೆ ಮಾಡಿ ದಾಖಲೆ ಬರೆಯಲಿ ಎಂಬುದೇ ನಮ್ಮ ಆಶಯ.

ಪಬ್ಲಿಕ್ ನೆಕ್ಸ್ಟ್ ವಿಶೇಷ ಸುದ್ದಿ: ವಿಶ್ವನಾಥ ಪಂಜಿಮೊಗರು

Edited By :
PublicNext

PublicNext

20/12/2025 06:43 pm

Cinque Terre

10.19 K

Cinque Terre

0

ಸಂಬಂಧಿತ ಸುದ್ದಿ