ಉಡುಪಿ; ಜಿಲ್ಲೆಯ ಕೋಟೇಶ್ವರದಲ್ಲಿರುವ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆ ಕಳೆದ ಅರವತ್ತು ವರ್ಷಗಳಿಂದ ಪರಂಪರ ರಥ ನಿರ್ಮಾಣ ಕಲೆಗೂ ಜೀವ ತುಂಬುತ್ತಾ ಬರುತ್ತಿದೆ. ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿಕೊಂಡು ಬಂದಿರುವ ಈ ಶಿಲ್ಪ ಪರಂಪರೆ, ಇಂದು ಕೂಡ ತನ್ನ ವೈಶಿಷ್ಟ್ಯತೆ ಮತ್ತು ಶಾಸ್ತ್ರೀಯ ಮೌಲ್ಯವನ್ನು ಕಾಪಾಡಿಕೊಂಡಿದೆ.
ಈ ಶಾಲೆಯ ಶಿಲ್ಪಿಗಳು ಇದುವರೆಗೆ ಸುಮಾರು 90ಕ್ಕೂ ಹೆಚ್ಚು ರಥಗಳನ್ನು ನಿರ್ಮಿಸಿರುವ ಅಪರೂಪದ ಸಾಧನೆ ಮಾಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ, ರಾಜ್ಯದ ಹೊರಗೂ ಇವರ ಕೈಚಳಕಕ್ಕೆ ಭಾರೀ ಬೇಡಿಕೆ ಇದೆ. ಇತ್ತೀಚೆಗೆ ಅಯೋಧ್ಯೆಯಲ್ಲಿಯೂ ರಥ ನಿರ್ಮಾಣಕ್ಕೆ ಇವರಿಗೆ ಆರ್ಡರ್ ದೊರಕಿರುವುದು, ಈ ಶಿಲ್ಪಕಲೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ.
ರಥ ನಿರ್ಮಾಣದಲ್ಲಿ ಬಳಸುವ ಮರದ ಆಯ್ಕೆ, ಅಳತೆ-ಮಾಪನ, ವಿನ್ಯಾಸ, ಅಲಂಕಾರ ಹಾಗೂ ಶಿಲ್ಪ ನಯತೆ—ಎಲ್ಲವೂ ಶಾಸ್ತ್ರೀಯ ವಿಧಾನಗಳನ್ನು ಅನುಸರಿಸಿ ನಡೆಸಲಾಗುತ್ತದೆ. ಪುರಾಣ, ಆಗಮ ಶಾಸ್ತ್ರ ಮತ್ತು ಶಿಲ್ಪ ಶಾಸ್ತ್ರದ ನಿಯಮಗಳನ್ನು ಪಾಲಿಸಿಕೊಂಡು ರಥಗಳನ್ನು ನಿರ್ಮಿಸುವುದು ಈ ಶಾಲೆಯ ಪ್ರಮುಖ ವೈಶಿಷ್ಟ್ಯವಾಗಿದೆ.
ಇಂತಹ ಪರಂಪರಾತ್ಮಕ ಶಿಲ್ಪಕಲೆಗಳನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ತೊಡಗಿರುವ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆ, ಮುಂದಿನ ಪೀಳಿಗೆಯಿಗೂ ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯನ್ನು ಸಾರುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
PublicNext
18/12/2025 11:28 am
LOADING...