ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಚಳಿಗಾಲಕ್ಕೆ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ನೀಡಿದ ಸಲಹೆ ಏನು?

ಮಂಗಳೂರು: ಚಳಿಗಾಲದಲ್ಲಿ ವೈರಸ್‌ ರೋಗಾಣುಗಳಿಗೆ ಅನುಕೂಲಕರ ವಾತಾವರಣವಿದ್ದು, ರೋಗ ಹರಡುವುದಕ್ಕೆ ವಿಪುಲವಾದ ಅವಕಾಶವಿರುತ್ತದೆ. ಶೀತಕಾರಕ ವೈರಸ್‌ಗಳು ರೋಗಗಳನ್ನು ಹರಡಲು ಆರಂಭಿಸುತ್ತದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್.ತಿಮ್ಮಯ್ಯ ಹೇಳಿದರು.

ಆದ್ದರಿಂದ ಚಳಿಗಾಲದಲ್ಲಿ ಕಾಲಿಗೆ ಸಾಕ್ಸ್, ಕೈಗೆ ಗ್ಲೌಸ್, ಕಿವಿಯನ್ನು ಮುಚ್ಚುವ ಸಾಧನಗಳನ್ನು ಧರಿಸಿಕೊಳ್ಳಬೇಕು‌. ಏಕೆಂದರೆ ಶೀತಗಾಳಿ ಬಹಳ ಬೇಗ ಮಾನವ ದೇಹವನ್ನು ಪ್ರವೇಶಿಸಿ ರೋಗಗಳನ್ನು ಸೃಷ್ಟಿ ಮಾಡುತ್ತದೆ. ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುವವರಿಗೆ ಥಂಡಿ ಹೆಚ್ಚಳವಾಗಿ ರಕ್ತನಾಳ ಸಂಕುಚಿತಗೊಂಡು ರಕ್ತ ಸಂಚಾರ ಕಡಿಮೆಯಾಗಬಹುದು. ಹೃದಯ ನಾಳದಲ್ಲಿ ರಕ್ತ ಸಂಚಾರ ಆಗದಿದ್ದರೆ ಹೃದಯಾಘಾತ, ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದರು.

ಆದ್ದರಿಂದ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾದಷ್ಟು ಚಟುವಟಿಕೆಗಳಿಂದ ಇರುವುದು ಉತ್ತಮ. ವ್ಯಾಯಾಮ ಮಾಡಬೇಕು. ಮೈಬೆಚ್ಚಗೆ ಇರುವ ವಸ್ತ್ರಧಾರಣೆ ಮಾಡಬೇಕು. ಮಕ್ಕಳ ಬಗ್ಗೆ ಈ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಕುಡಿಯಲು ಕುದಿಸಿ ಅರಿಸಿದ ಬಿಸಿ ನೀರನ್ನೇ ಬಳಸಬೇಕು. ಕೋವಿಡ್ ಸಂದರ್ಭದ ಮುನ್ನೆಚ್ಚರಿಕಾ ಕ್ರಮಗಳನ್ನು ಬಳಸುವುದು ಇನ್ನೂ ಉತ್ತಮ ಎಂದು ಡಾ.ಹೆಚ್.ಆರ್.ತಿಮ್ಮಯ್ಯ ಹೇಳಿದರು.

Edited By : Vinayak Patil
PublicNext

PublicNext

18/12/2025 04:26 pm

Cinque Terre

13.66 K

Cinque Terre

0

ಸಂಬಂಧಿತ ಸುದ್ದಿ