ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಬ್‌ನಲ್ಲಿ ಯುವತಿ ಜೊತೆಗೆ ಅಶ್ಲೀಲ ವರ್ತನೆ, ನಂಬರ್ ಕೇಳಿ ಕಾರ್‌ನಲ್ಲಿ ಕೂರುವಂತೆ ಬಲವಂತ, ಸಂಘಟನೆ ಮುಖಂಡನ ವಿರುದ್ಧ ಎಫ್ ಐಆರ್

ಬೆಂಗಳೂರು: ಆ ಯುವತಿಯರೆಲ್ಲರೂ ನಿನ್ನೆ ಪಾರ್ಟಿ ಮಾಡಬೇಕು ಅಂತ ಪಬ್ ಒಂದಕ್ಕೆ ಹೋಗಿದ್ದರು. ಪಾರ್ಟಿ ಮಾಡುವ ಸಂದರ್ಭದಲ್ಲಿ ಅಲ್ಲಿದ್ದ ಯುವತಿಯರಿಗೆ ಅಲ್ಲಿದ್ದ ಕೆಲವರು ಚುಡಾಯಿಸಿದ್ದಾರೆ. ಅಸಭ್ಯವಾಗಿ ಸಹ ವರ್ತಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ದೊಡ್ಡ ಗಲಾಟೆಯೇ ನಡೆದು ಹೋಗಿ ಸಂಘಟನೆ ಮುಖಂಡನ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ.

ಈ ಸಿಸಿಟಿವಿ ದೃಶ್ಯಗಳನ್ನು ನೋಡಿದ್ರೇನೆ ಅರ್ಥವಾಗುತ್ತೆ. ಇಲ್ಲೊಂದು ಗಲಾಟೆ ಆಗಿದೆ ಅಂತ. ಹೌದು ಈ ಎಲ್ಲಾ ಗಲಾಟೆಗೂ ಸಹ‌ ಕಾರಣ ಒಂದು ಹುಡುಗಿಯ ವಿಚಾರ. ಯೆಸ್ ಈ ಫೋಟೋದಲ್ಲಿರುವ ಈ ವ್ಯಕ್ತಿಯ ಹೆಸರು ಉಮೇಶ್. ಈತ ಮಾಜಿ ಸಚಿವರ ಶಿಷ್ಯ ಅಂತಾನು ಹೇಳಲಾಗ್ತಿದೆ. ಅಷ್ಟೇ ಅಲ್ಲದೇ ಕನ್ನಡ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಈತ‌ನೇ ಈ ಗಲಾಟೆಗಳಿಗೆಲ್ಲಾ ರೂವಾರಿ ಎನ್ನಲಾಗಿದೆ. ನಿನ್ನೆ ನಾಗರ ಬಾವಿ ಬಳಿಯಲ್ಲಿರುವ ಪಬ್ ಒಂದಕ್ಕೆ ಮೂವರು ಹುಡುಗಿಯರು ಹೋಗಿದ್ದಾರೆ. ಈ ಹುಡು ಗಿಯರ ಜೊತೆ ಓರ್ವ ಯುವತಿಯ ಬಾವ ಸಹ ಇದ್ರಂತೆ. ಇದೇ ಪಬ್ ಗೆ ಈ ಉಮೇಶ್ ಸಹ ಹೋಗಿದ್ದ. ರಾತ್ರಿ ಕಂಠ ಪೂರ್ತಿ ಕುಡಿದಿದ್ದ ಈ ಉಮೇಶ, ಈ ಹುಡುಗಿಯರಲ್ಲಿ ಓರ್ವಳಿಗೆ ನಿನ್ನ ನಂಬರ್ ಕೊಡು ಅಂತ ಕೇಳಿದ್ದಾನೆ‌. ಅದಕ್ಕೆ ಆ ಯುವತಿ ನಿರಾಕರಿಸಿದ್ದಾಳೆ. ನಂತರ ಕಣ್ಣು ಸನ್ನೆ ಮಾಡೋದು, ಅಸಭ್ಯವಾಗಿ ವರ್ತಿಸೋದು ಮಾಡಿದ್ದಾನೆ.

ಇನ್ನು ಪಾರ್ಟಿ ಮುಗಿಸಿ ಹೊರಡುತ್ತಿದ್ದ ವೇಳೆ ಕ್ಯಾಬ್ ಹತ್ತೋದಕ್ಕೆ ಅಂತ ಯವತಿಯರು ಬಂದಿದ್ದಾರೆ. ಆಗ ತಕ್ಷಣ ಈ ಉಮೇಶ್ ಸಹ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ಮಾತನಾಡಿದ್ದಾನೆ ಎಂಬಾ ಆರೋಪ ಕೇಳಿಬಂದಿದೆ. ನೀವೆಲ್ಲಾ ಎಂತಹ ಹುಡುಗಿಯರು ಅಂತ ಗೊತ್ತಿದೆ. ಬಾ ನೀನು ಅಂತ ಕ್ಯಾಬ್ ನಲ್ಲಿ ಕೂರಿಸೋದಕ್ಕೆ ಎಳೆದಾಡಿದ್ದಾನೆ ಎನ್ನಲಾಗಿದೆ. ಇದ್ರಿಂದ ಈ ಉಮೇಶನಿಗೂ ಮತ್ತು ಅಲ್ಲಿದ್ದ ಯುವತಿಯ ಬಾವನಿಗೂ ಅಲ್ಲಿಯೇ ಮಾತಿಗೆ ಮಾತು ಬೆಳದಿದೆ.‌ ನಂತರ ಇಬ್ಬರು ಸಹ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಉಮೇಶನ ಬೆಂಬಲಿಗರು ಮತ್ತು ಇವರು ಇಬ್ಬರು ಸಹ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ತಕ್ಷಣ ಅಲ್ಲಿದ್ದ ಕೆಲವರು ಯವತಿಯು ಇದ್ದಿದ್ದರಿಂದ ಎಲ್ಲಾರನ್ನು ಕಳಿಸಿಕೊಟ್ಟಿದ್ದಾರೆ.

ಇನ್ನು ಈ ಘಟನೆ‌ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಉಮೇಶ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದೆ. ಇವತ್ತು ಉಮೇಶ್ ಕೂಡ ನನ್ನ ಮೇಲೆ ಹಲ್ಲೆ ನಡೆಸಿದ್ರು ಅಂತ ಪ್ರತಿದೂರು ನೀಡಿದ್ದು ಪೊಲೀಸ್ರು ಉಮೇಶ ನೀಡಿರೊ ದೂರು ಕುರಿತು ಪರಿಶೀಲನೆ ನಡೆಸ್ತಿದ್ರೆ ಇತ್ತ ಎಫ್ ಐ ಆರ್ ದಾಖಲಾಗ್ತಿದ್ದಂತೆ ಉಮೇಶ ತಲೆ ಮರೆಸಿಕೊಂಡಿದ್ದಾನೆ.

Edited By :
PublicNext

PublicNext

18/12/2025 08:29 pm

Cinque Terre

44.44 K

Cinque Terre

0

ಸಂಬಂಧಿತ ಸುದ್ದಿ