ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯ ಮಾರಾಟದಲ್ಲಿ ನವೆಂಬರ್ ಅಂತ್ಯಕ್ಕೆ 24,287 ಕೋಟಿ ರೂ. ಆದಾಯ

ಬೆಂಗಳೂರು: ರಾಜ್ಯದಲ್ಲಿ ಅಬಕಾರಿ ಆದಾಯದ ಪ್ರಮಾಣವು ಏರಿಕೆಯಾಗುತ್ತಿದ್ದು, ಪ್ರಸಕ್ತ 2025-26ನೇ ಹಣಕಾಸು ವರ್ಷದ ನವೆಂಬರ್ ಅಂತ್ಯದ ವೇಳೆಗೆ ಸರ್ಕಾರಕ್ಕೆ 24,287.83 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಇಂದು ಮೇಲ್ಮನೆ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ರೂಪದ ಉತ್ತರ ನೀಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು, ರಾಜ್ಯದ ಅಬಕಾರಿ ವಹಿವಾಟಿನ ಕ್ರಮ ಮತ್ತು ಪರವಾನಗಿಗಳ ಬಗ್ಗೆ ಮಾಹಿತಿ ನೀಡಿದರು.

ಆದಾಯದ ಹರಿವು: ಕಳೆದ ವರ್ಷಕ್ಕೆ ಹೋಲಿಸಿದರೆ ಸಾಧನೆ

2024-25ನೇ ಸಾಲಿನಲ್ಲಿ ಒಟ್ಟು ಅಬಕಾರಿ ಆದಾಯ 34,636.11 ಕೋಟಿ ರೂ. ಆಗಿತ್ತು (ಇದರಲ್ಲಿ 28,852.53 ಕೋಟಿ ರೂ. ಮೌಲ್ಯದ ಹಾಟ್‌ ಡ್ರಿಂಕ್ಸ್‌ ಮತ್ತು ಬಿಯರ್‌ನಿಂದ 5,783.58 ಕೋಟಿ ರೂ. ಆದಾಯ ಬಂದಿತ್ತು). ಪ್ರಸಕ್ತ ಸಾಲಿನ ನವೆಂಬರ್ 2025ರ ಅಂತ್ಯಕ್ಕೆ ಹಾಟ್ ಡ್ರಿಂಕ್ಸ್'ನಿಂದ 20,614.08 ಕೋಟಿ ರೂ. ಹಾಗೂ ಬಿಯರ್ ಮಾರಾಟದಿಂದ 3,673.75 ಕೋಟಿ ರೂ. ಸಂಗ್ರಹವಾಗಿದೆ.

ಪರವಾನಗಿಗಳ ವಿವರ:

ಸಿಎಲ್-2 ಮತ್ತು ಸಿಎಲ್-9 ಗೆ ಬ್ರೇಕ್ ಹಾಕಲಾಗಿದೆ. ರಾಜ್ಯದಲ್ಲಿ ಒಟ್ಟು ಎಲ್ಲ ವಿಧವಾದ ಅಬಕಾರಿ ಪರವಾನಗಿಗಳು ಒಟ್ಟು 14,099 ಇವೆ. ಗಮನಾರ್ಹ ಅಂಶವೆಂದರೆ, 1992ರಿಂದಲೇ ಹೊಸದಾಗಿ ಸಿಎಲ್-2 (ಚಿಲ್ಲರೆ ಮದ್ಯದ ಅಂಗಡಿ) ಮತ್ತು ಸಿಎಲ್-9 (ಬಾರ್ ಮತ್ತು ರೆಸ್ಟೋರೆಂಟ್) ಸನ್ನದುಗಳನ್ನು ನೀಡಲು ನಿರ್ಬಂಧ ವಿಧಿಸಲಾಗಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಮುಖ ಸನ್ನದುಗಳ ವಿವರ ಹೀಗಿದೆ:

• ಸಿಎಲ್-2 (ಚಿಲ್ಲರೆ ಅಂಗಡಿಗಳು): 4,006

• ಸಿಎಲ್-7 (ಹೋಟೆಲ್ ಮತ್ತು ವಸತಿಗೃಹ): 3,472

• ಸಿಎಲ್-9 (ಬಾರ್ ಮತ್ತು ರೆಸ್ಟೋರೆಂಟ್): 3,652

• ಸಿಎಲ್-11ಸಿ (ಎಂ.ಎಸ್.ಐ.ಎಲ್): 1,077

ಮಾರಾಟದ ಪ್ರಮಾಣ (ಲಕ್ಷ ಕೇಸ್‌ಗಳಲ್ಲಿ)

ಮದ್ಯದ ಮಾರಾಟದ ಅಂಕಿ-ಅಂಶಗಳನ್ನು ಗಮನಿಸಿದರೆ, 2024-25ರಲ್ಲಿ 708.85 ಲಕ್ಷ ಕೇಸ್ ಹಾಟ್‌ ಡ್ರಿಂಕ್ಸ್‌ ಹಾಗೂ 450.36 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. 2025-26ರ ನವೆಂಬರ್ ಅಂತ್ಯಕ್ಕೆ 458.95 ಲಕ್ಷ ಕೇಸ್ ಹಾಟ್‌ ಡ್ರಿಂಕ್ಸ್‌ ಹಾಗೂ 257.34 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ ಎಂದು ಅಬಕಾರಿ ಸಚಿವರು ಸದನಕ್ಕೆ ಲಿಖಿತ ಉತ್ತರವನ್ನು ಒದಗಿಸಿದರು.

Edited By : Nagaraj Tulugeri
PublicNext

PublicNext

18/12/2025 08:46 pm

Cinque Terre

6.58 K

Cinque Terre

0

ಸಂಬಂಧಿತ ಸುದ್ದಿ