ಲಖನೌ: ಹೀಗೆ ಪಾರ್ಕ್‌ನಲ್ಲಿ ಪೊಲೀಸರು ಈ ಯುವಕ ಯುವತಿಯರನ್ನು ತಡೆದು ವಿಚಾರಣೆ ನಡೆಸ್ತಿರೋದು ನೋಡಿ ಇವ್ರೇನೋ ತಪ್ಪು ಮಾಡಿದ್ದಾರೆನೋ ಅಂತ ಭಾವಿಸಬೇಡಿ. ಯಾಕಂದ್ರೆ ಇಲ್ಲಿ ತಪ್ಪಾಗಿರೋದೆ ಪೊಲೀಸರಿಂದ.
ಹೌದು.. ಒಬ್ಬ ಸಹೋದರ ತನ್ನ ಸಹೋದರಿಯರೊಂದಿಗೆ ದೇವಸ್ಥಾನಕ್ಕೆ ಹೋಗಿ ಅಲ್ಲೇ ಪಕ್ಕದಲ್ಲಿದ್ದ ಪಾರ್ಕ್ ನಲ್ಲಿ ಓಡಾಡ್ತಾ ಇದ್ರು. ಇವರನ್ನು ನೋಡಿದ ಮಹಿಳಾ ಪೊಲೀಸ್, ಇವರು ಪ್ರೇಮಿಗಳೆಂದು ತಪ್ಪಾಗಿ ಊಹಿಸಿ, ನೈತಿಕ ಪೊಲೀಸ್ ಗಿರಿ ಆರಂಭಿಸಿ ಕಿರುಕುಳ ನೀಡಿದ್ದಾರೆ. ಇವರಿಬ್ಬರು ಅಣ್ಣ- ತಂಗಿ ಅಂತ ಹೇಳಿದಾಗ ಅದನ್ನ ನಂಬದ ಪೊಲೀಸ್ ಸಿಬ್ಬಂದಿ ನಿನ್ನ ತಂದೆಗೆ ಕರೆ ಮಾಡಿ ಕನ್ಫರ್ಮ್ ಮಾಡಿಸು ಎಂದಿದ್ದಾರೆ. ಆಗ ಇವ್ರು ತಂದೆಗೆ ಕರೆ ಮಾಡಿ ಅಣ್ಣ ತಂಗಿ ಎಂಬುದನ್ನ ದೃಢಪಡಿಸಿದ್ದಾರೆ.
ಇಷ್ಟಾದ್ಮೇಲೂ ಪೊಲೀಸ್ ತನ್ನ ತಪ್ಪನ್ನು ಒಪ್ಪಿಕೊಳ್ಳದೆ, ಈ ಹುಡುಗಿಯರನ್ನೇ ಗದರಿಸಲು ಶುರು ಮಾಡಿ ನೀವು ಪೋಷಕರೊಂದಿಗೇ ಹೊರಗೆ ಹೋಗಬೇಕು, ಏನಾದರೂ ಅಹಿತಕರ ಘಟನೆ ನಡೆದರೆ ಏನು ಗತಿ ಅಂತ ಗದರಿಸಿದ್ದಾರೆ. ಸದ್ಯ ಘಟನೆಯ ವಿಡಿಯೊ ವೈರಲ್ ಆಗಿದ್ದು, ಪೊಲೀಸರ ಈ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೆಂದು ವಿಡಿಯೋವನ್ನ ಶೇರ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
PublicNext
18/12/2025 10:43 pm
LOADING...