ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಜಿಲ್ಲಾಸ್ಪತ್ರೆಗೆ ಹೊಸ ಕಟ್ಟಡ, ಅನುದಾನದ ಕೊರತೆಯಿಂದ ಸೇವೆಗೆ ಅಲಭ್ಯ

ಉಡುಪಿ ; ಉಡುಪಿ ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡ ಜೀರ್ಣಾವಸ್ಥೆಗೆ ತಲುಪಿದ್ದರಿಂದ, ಸರ್ಕಾರದ ಯೋಜನೆಯಡಿ ಹೊಸ ಕಟ್ಟಡ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಆದರೆ ಕಟ್ಟಡ ಸಿದ್ಧವಾಗಿದ್ದರೂ, ಮುಖ್ಯ ಆರೋಗ್ಯ ಸೇವೆಗಳು ಸಾರ್ವಜನಿಕರಿಗೆ ಇನ್ನೂ ಲಭ್ಯವಾಗಿಲ್ಲ. ಕಾರಣ—ಅನುದಾನ ಮತ್ತು ಸಿಬ್ಬಂದಿ ಕೊರತೆ.

ಸುಮಾರು 115 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವಂತಹ ಈ ಆಸ್ಪತ್ರೆಯಲ್ಲಿ 250 ಬೆಡ್ಡಿನ ಸೌಲಭ್ಯ ಇರಲಿದೆ. ವಿಶಾಲ ಮತ್ತು ಸ್ವಚ್ಛ ವಾರ್ಡ್‌ಗಳು,

ತುರ್ತು ಚಿಕಿತ್ಸಾ ವಿಭಾಗ,

ಆಧುನಿಕ ವೈದ್ಯಕೀಯ ಸಾಧನಗಳ ವ್ಯವಸ್ಥೆ,

ಶಸ್ತ್ರಚಿಕಿತ್ಸೆಗೆ ಪ್ರತ್ಯೇಕ, ನವೀಕರಿಸಿದ OT ಕಾಂಪ್ಲೆಕ್ಸ್

ಗರ್ಭಿಣಿ ಮಹಿಳೆ ಹಾಗೂ ಶಿಶು ಆರೋಗ್ಯಕ್ಕೆ ವಿಶೇಷ ಸೌಲಭ್ಯ ರೋಗಿಗಳಿಗೆಅನುಕೂಲಕರವಾದ ನಿರೀಕ್ಷಣಾ ಪ್ರದೇಶಗಳು ಹೀಗೆ ಎಲ್ಲವೂ ಈ ಆಸ್ಪತ್ರೆಯಲ್ಲಿ ಇರಲಿದೆ.ಆದ್ರೆ ಇಂದು ಇದರ ನಿರ್ಮಾಣ ಶೇಕಡಾ 80 ರಷ್ಟು ಆಗಿದ್ದು ಉಳಿದ ಕೆಲಸಗಳು ನಿಧಾನವಾಗಿ ಸಾಗಿದೆ.

ಹೊಸ ಕಟ್ಟಡದಲ್ಲಿ ವೈದ್ಯಕೀಯ ಸೇವೆಗಳನ್ನು ಆರಂಭಿಸಲು ಅಗತ್ಯವಾದ ಯಂತ್ರೋಪಕರಣಗಳು, ಹಾಸಿಗೆಗಳ ವ್ಯವಸ್ಥೆ, ತುರ್ತು ವಿಭಾಗದ ಸಜ್ಜುಗೊಳಿಕೆ— ಇವುಗಳಿಗೆ ಬೇಕಾದ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಕಾರ್ಯಾರಂಭವಾಗಿಲ್ಲ. ಕಟ್ಟಡ ಸಿದ್ಧವಾಗಿದ್ದರೂ ಒಳಗಿನ ವ್ಯವಸ್ಥೆಗಳು ಪೂರ್ಣಗೊಳ್ಳದೆ ಆಸ್ಪತ್ರೆ ಇನ್ನೂ ನಿರೀಕ್ಷೆಯಲ್ಲಿದೆ.

ವೈದ್ಯರ ನೇಮಕಾತಿ,ಪರಾಮೆಡಿಕಲ್

ಸಿಬ್ಬಂದಿ ನೇಮಕ, ಆಡಳಿತ ಸಿಬ್ಬಂದಿ ನೇಮಕ ಇವುಗಳು ಇನ್ನೂ ಜರುಗದಿರುವುದರಿಂದ ರೋಗಿಗಳಿಗೆ ಸಂಪೂರ್ಣ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

ಇನ್ನೂ ಕ್ರೀಟಿಕಲ್ ಕೇರ್ ಸೆಂಟರ್ ನಲ್ಲೂ ಅಗತ್ಯ ಉಪಕರಣಗಳ ಖರೀದಿ

ICU ಹಾಸಿಗೆಗಳ ಅಳವಡಿಕೆ,

ನಿರಂತರ ವಿದ್ಯುತ್-ಆಮ್ಲಜನಕ ವ್ಯವಸ್ಥೆ ಇವು ಅಪೂರ್ಣವಾಗಿರುವುದರಿಂದ ಸೆಂಟರ್ ಕಾರ್ಯಾರಂಭವಾಗಿಲ್ಲ.

ಕಟ್ಟಡ ಸಿದ್ಧವಾಗಿದ್ದರೂ ಸೇವೆ ಸಿಗದಿರುವುದು ಜನರಲ್ಲಿ ಅಸಮಧಾನ ಮೂಡಿಸಿದೆ. ಜಿಲ್ಲಾಸ್ಪತ್ರೆಯ ಮೇಲೆ ಸಾವಿರಾರು ಜನ ಅವಲಂಬಿತರಾಗಿದ್ದರಿಂದ, ಸರ್ಕಾರ ತ್ವರಿತ ಅನುದಾನ ಬಿಡುಗಡೆ, ನೇಮಕಾತಿ ಹಾಗೂ ಸೌಲಭ್ಯಗಳ ಸಜ್ಜುಗೊಳಿಕೆ ಮಾಡಲು ಆಗ್ರಹ ವ್ಯಕ್ತವಾಗುತ್ತಿದೆ.

Edited By :
PublicNext

PublicNext

13/12/2025 12:31 pm

Cinque Terre

10.68 K

Cinque Terre

0

ಸಂಬಂಧಿತ ಸುದ್ದಿ