ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಜಾನಪದ ವಾದನದಲ್ಲಿಯೇ ಅತೀ ದುಬಾರಿ ಕೊರಗರ ಡೋಲು

ಬ್ರಹ್ಮಾವರ: ಕರಾವಳಿಯ ಮೂಲನಿವಾಸಿಗಳು ಎನ್ನಲಾದ ಕೊರಗ ಜನಾಂಗದವರಲ್ಲಿ ಮಾತ್ರ ಕಾಣಸಿಗುವ ಡೋಲು ಬೇರೆಯವರಿಂದ ನುಡಿಸಲು ಅಸಾಧ್ಯವಾಗಿದ್ದು ಕಂಬಳ,ಜಾತ್ರೆ, ಕೋಲ,ಮಾರಿ ಸೇರಿದಂತೆ ಕೆಲವು ಕಡೆಯಲ್ಲಿ ಅದು ಬೇಕೆ ಬೇಕು ಆದರೆ ಅದರ ಬೆಲೆ ಮಾತ್ರ ಜಾನಪದ ವಾದನದಲ್ಲಿಯೇ ಅತೀ ದುಬಾರಿ ಎನ್ನಲಾಗಿದೆ.

ಹಲಸು ಹೆಬ್ಬೆಲಸು ಅಥವಾ ಹೊನ್ನೆ ಮರದ ಒಂದೇ ತುಂಡಿನಿಂದ ಮಾತ್ರ ಮಾಡುವ ಡೋಲಿಗೆ ಹಸುವಿನ ಅಥವಾ ಕೋಣದ ಚರ್ಮದಲ್ಲಿ ಮಾತ್ರ ಅಬ್ಬರದ ಮತ್ತು ಮೃದುತ್ವದ ಧ್ವನಿಯನ್ನು ನುಡಿಸಲು ಸಾಧ್ಯವಾಗಿದ್ದು ಒಂದು ಡೋಲಿಗೆ ಇಂದಿನ ಕಾಲದಲ್ಲಿ 50 ಸಾವಿರ ರೂಪಾಯಿ ತಗಲುತ್ತದೆ. ಅದರ ಜೊತೆ ಚಂಡೆ ಮತ್ತು ತಾಳ,ಕೊಳಲು ಕೂಡಾ ಬೇಕಾಗುತ್ತದೆ ಎನ್ನುತ್ತಾರೆ ಮಧುವನದ ವೆಂಕಟೇಶ ಕೊರಗ.

ಮೆರವಣಿಗೆ ಮುಂತಾದ ಕಾರ್ಯಕ್ರಮಗಳಿಗೆ ಯಾವುದೇ ವಾದನಗಳು ಬಂದರೂ ಕೊರಗರಿಗೆ ಅವರ ಮನೆದೇವರು ಹಬ್ಬ ಸಾವು ಮತ್ತು ಅವರದೇ ಅನೇಕ ಬೇಡಿಕೆಯ ಹೋರಾಟಗಳಿಗೆ ಧ್ವನಿಯಾಗುವುದು ಅವರು ಅತೀ ಪೂಜನೀಯ ಭಾವನೆ ನೀಡುವ ಡೋಲುಗಳಿಗೆ ಮಾತ್ರವಾಗಿದ್ದು ಬ್ರಹ್ಮಾವರದಲ್ಲಿ ತಾಲೂಕು ಆಡಳಿತ ಸೌಧದ ಮುಂದೆ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಡೋಲಿನ ವಾದನದೊಂದಿಗೆ ವೆಂಕಟೇಶ ಕೊರಗರ ಸಂಶೋಧನೆಯ ಬಿದಿರಿನ ಬದಲು ಪಿವಿಸಿ ಪೈಪ್‌ನಿಂದ ನಾಲ್ಕು ರಂಧ್ರದಿಂದ ಮಾಡಲಾದ ಕೊಳಲಿನ ನಾದ ಮೊಳಗಿತ್ತು.

-ಶಿವರಾಮ ಆಚಾರ್ಯ ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ

Edited By :
PublicNext

PublicNext

19/12/2025 09:43 am

Cinque Terre

6.06 K

Cinque Terre

0

ಸಂಬಂಧಿತ ಸುದ್ದಿ