ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೊಲೀಸರು ದುರ್ವರ್ತನೆ ತೋರಿಲ್ಲ - ಅಕ್ಷತಾ ಪೂಜಾರಿ ಆರೋಪ ಸಂಪೂರ್ಣ ಸುಳ್ಳು - ದೇವೇಂದ್ರ ಸುವರ್ಣ

ಉಡುಪಿ: ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ಅಕ್ಷತಾ ಪೂಜಾರಿ ಎಂಬ ಯುವತಿ ಮೇಲೆ ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೇವೇಂದ್ರ ಸುವರ್ಣ ಸ್ಪಷ್ಟನೆ ನೀಡಿದ್ದಾರೆ.

"ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂಬ ಆರೋಪ ಸಂಪೂರ್ಣ ಸುಳ್ಳು. ಪೊಲೀಸರು ಅವರ ಮನೆಯ ಒಳಗೆ ಹೋಗಿಯೇ ಇಲ್ಲ" ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ನಾನು ಕೂಡ ಪೊಲೀಸರ ಜೊತೆಗೆ ಸ್ಥಳದಲ್ಲಿದ್ದೆ, ಅವರ ಆರೋಪ ನಿರಾಧಾರವಾದದ್ದು ಎಂದು ಸುವರ್ಣ ತಿಳಿಸಿದ್ದಾರೆ.

ನನಗೆ ಅನ್ಯಾಯವಾಗಿದೆ: ಹೋರಾಟದ ಎಚ್ಚರಿಕೆ

ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಂದ್ರ ಸುವರ್ಣ, ಈ ಪ್ರಕರಣದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಅಕ್ಷತಾ ಪೂಜಾರಿ ಎಲ್ಲರೂ ನಂಬುವ ರೀತಿಯಲ್ಲಿ ಪೊಲೀಸರು ಮತ್ತು ತಮ್ಮ ಮೇಲೆ ದೊಡ್ಡ ಮಟ್ಟದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸತ್ಯ ಇಂದಲ್ಲ ನಾಳೆ ಹೊರಬರಲಿದೆ. ಈ ಅನ್ಯಾಯದ ವಿರುದ್ಧ ಸಮುದಾಯದ ಜನರ ಬೆಂಬಲದೊಂದಿಗೆ ಹೋರಾಟ ನಡೆಸುವ ಬಗ್ಗೆ ಯೋಚನೆ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಘಟನೆಯ ವಿವರಣೆ ಮತ್ತು ಸಾಕ್ಷ್ಯ

ಕೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಆಶಿಕ್ ಎಂಬವರ ಮನೆಗೆ ಪೊಲೀಸರು ಹೋದಾಗ ನಾನು ಜೊತೆಯಲ್ಲಿದ್ದೆ. ಪೊಲೀಸರು ಅಕ್ಷತಾ ಪೂಜಾರಿಗೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ನಾನು ಅಕ್ಷತಾ ಮನೆಯಿಂದ ಕೆಲವು ದೂರ ನಿಂತಿದ್ದೆ, ಪೊಲೀಸರು ಕೂಡ ಮನೆಯೊಳಗೆ ಪ್ರವೇಶ ಮಾಡಿಲ್ಲ. ಈ ಸಂಬಂಧ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿ ಇಟ್ಟುಕೊಂಡಿದ್ದಾರೆ. ಹಾಗಾಗಿ, ನನ್ನ ಮತ್ತು ಪೊಲೀಸರ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ದೇವೇಂದ್ರ ಸುವರ್ಣ ಪುನರುಚ್ಚರಿಸಿದ್ದಾರೆ

Edited By :
PublicNext

PublicNext

18/12/2025 02:01 pm

Cinque Terre

8.29 K

Cinque Terre

0

ಸಂಬಂಧಿತ ಸುದ್ದಿ