ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉಡುಪಿ ಶಾಸಕರು ಸ್ಪೀಕರ್ ಗೆ ಗೌರವ ಕೊಡುವುದು ಕಲಿಯಲಿ; ಪ್ರಸಾದ್ ರಾಜ್ ಕಾಂಚನ್ ವಾಗ್ದಾಳಿ

ಉಡುಪಿ: ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾಡಿರುವ ಆರೋಪಗಳನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಶಾಸಕರಾಗಿ ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಜನರಲ್ಲಿ ಕೋಮು ಭಾವನೆ ಕೆರಳಿಸುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಡುಪಿಯ ಅಭಿವೃದ್ಧಿಯ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವ ಬದಲು ಸಣ್ಣ ವಿಷಯವನ್ನು ದೊಡ್ಡದು ಮಾಡಿ ವಿವಾದಗೊಳಿಸುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ ಎಂದರು.

ಹರಿಕಥೆ ಎಂಬುದು ಶ್ರೇಷ್ಠ ಕಲೆ. ಕರಾವಳಿಯಲ್ಲಿ ಸಾಮಾನ್ಯವಾಗಿ ಅದನ್ನು ಅನಗತ್ಯವಾಗಿ ಸುದೀರ್ಘ ಮಾತನಾಡುವವರಿಗೆ ಎಲ್ಲರೂ ಬಳಸುತ್ತಾರೆ. ಆದರೆ, ತನ್ನ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಶಾಸಕರು ಧರ್ಮ ಹಾಗೂ ಸಂಪ್ರದಾಯವನ್ನು ಗುರಾಣಿಯಾಗಿ ಬಳಸುತ್ತಿರುವುದು ಖಂಡನೀಯ ಎಂದರು.

ಸದನದ ಘನತೆ ಹಾಗೂ ಸಮಯವನ್ನು ಕಾಪಾಡುವುದು ಸಭಾಧ್ಯಕ್ಷರ ಕರ್ತವ್ಯ. ನೇರವಾಗಿ ವಿಷಯಕ್ಕೆ ಬನ್ನಿ ಎಂದು ಹೇಳುವುದು ಸಂಸದೀಯ ಶಿಸ್ತಿನ ಭಾಗವಾಗಿದೆಯೇ ಹೊರತು ಸಂಪ್ರದಾಯಕ್ಕೆ ಮಾಡಿದ ಅವಮಾನವಲ್ಲ ಎಂದು ಕಾಂಚನ್, ಖಾದ‌ರ್ ನಡೆಯನ್ನು ಸಮರ್ಥಿಸಿ ಕೊಂಡರು. ಜೊತೆಗೆ ಶಾಸಕರು ಚಳಿ ಬಿಡಿಸುತ್ತೇನೆ ಎಂಬ ಪದ ಬಳಕೆ ಮಾಡಿದ್ದಾರೆ. ಅವರು ಚಳಿ ಬಿಡಿಸಲಿ ನೋಡೋಣ ಎಂದು ಪ್ರಸಾದ್ ಸವಾಲು ಹಾಕಿದ್ದಾರೆ.

Edited By : Vinayak Patil
PublicNext

PublicNext

18/12/2025 07:33 pm

Cinque Terre

7.05 K

Cinque Terre

0

ಸಂಬಂಧಿತ ಸುದ್ದಿ