ಮುಲ್ಕಿ: ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಸಹಯೋಗದಲ್ಲಿ ಹಳೆಯಂಗಡಿಯ ಇಂಡಿಯನ್ ಯೋಗ ಮಂದಿರದಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ ನಡೆಯಿತು ಸೌಹಾರ್ದ ಕೂಟವನ್ನು ವಿಶ್ರಾಂತ ಬಿಷಪ್ ರೈಟ್ ರೆವೆ. ಮೋಹನ್ ಮನೋರಾಜ್ ಉದ್ಘಾಟಿಸಿ ಮಾತನಾಡಿ ಏಸುಕ್ರಿಸ್ತ ದೇವರ ತತ್ವಗಳು ಸಾಮಾನ್ಯರಲ್ಲೂ ದೇವರ ಶಕ್ತಿಯನ್ನು ಕಾಣುವ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಶುಭದಿನಗಳನ್ನು ತರುತ್ತವೆ" ಎಂದರು
ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಆಶೀರ್ವಚನ ನೀಡಿ ಯೇಸು ಕ್ರಿಸ್ತರು ಜಗತ್ತಿಗೆ ಭಾವೈಕ್ಯ ಸಂದೇಶ ನೀಡಿದ್ದಾರೆ. ಒಳ್ಳೆಯದನ್ನು ಬಯಸುವವರು ಮಾತ್ರ ಧರ್ಮರಕ್ಷಕರಾಗಿದ್ದಾರೆ. ಧರ್ಮ ಎನ್ನುವುದು ಭಗವಂತನನ್ನು ಕಾಣುವುದಕ್ಕಾಗಿ ಮಾತ್ರ ಮೀಸಲಾಗಿದೆಯೋ ಹೊರತು ಧರ್ಮವೇ ದೇವರಲ್ಲ' ಎಂದರು
ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷ ನೋಟರಿ ವಕೀಲ ಡೇನಿಯಲ್ ದೇವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರಿಸ್ಮಸ್ ಹಬ್ಬ ಕೊಡುಗೆಗಳ ಹಬ್ಬ, ಸೌಹಾರ್ದ ಸಾಮರಸ್ಯದಿಂದ ಬಾಳೋಣ" ಎಂದರು
ಸಿ.ಎಸ್.ಐ ಬಿಷಪ್ ರೈಟ್ ರೆವೆ ಹೇಮಚಂದ್ರ ಕುಮಾರ್ ,ಕದಿಕೆ
ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಪಿ.ಎ ಅಬ್ದುಲ್ಲ ಝೈನಿ ಬಡಗನ್ನೂರು
ರೆವೆ. ಎಡ್ರಿನ್ ವಾಲ್ಟರ್, ಸಿ.ಎಸ್.ಐ ವಲಯ ಅಧ್ಯಕ್ಷ ರೆವೆ. ಗೋಲ್ಡಿನ್ ಜಿ ಬಂಗೇರಾ, ರವೆ. ಜೋಸೆಫ್ ಜಾನ್ಸನ್ ಬಿಪಪ್ ಚಾಲಿನ್,
ಸಿ.ಎಸ್.ಐ ಚರ್ಚ್ ಸಭಾಪಾಲಕ ಅಮೃತ್‌ರಾಜ್ ಖೋಡೆ, ಸ್ಪೀವನ್ ಸರ್ವೋತ್ತಮ, ಎಡ್ವರ್ಡ್ ಎಸ್ ಕರ್ಕಡ, ರೆವೆ. ವಿನಯಲಾಲ್ ಬಂಗೇರ, ಸಂಧ್ಯಾ ಸುಪ್ರೀತ, ರವೆ. ಶಶಿಕಲಾ ಅಂಚನ್, ವಿಶ್ರಾಂತ ಸಭಾಪಾಲಕ ಐಸನ್ ಪಾಲನ್ನ, ಪುಟ್ಟುರಾಜ್, ದ.ಕ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿಕೋಸ್ತ ಎಮ್, ಹಳೆಯಂಗಡಿ ಕಾಲೇಜಿನ ಪ್ರಾಂಶುಪಾಲ ಜಗದೀಶ್, ನಿವೃತ್ತ ಅಧಿಕಾರಿ ಜಾಫ್ರಿ ಕೋಟ್ಯಾನ್, ಮರ್ಕೇರಾಹಿಲ್ . ಸಂತೋಷ್ ಕುಮಾರ್, ಹಿರಿಯರಾದ ಹ್ಯಾಂಡ್ಲಿ ಸೈಮನ್, ಹಳೆಯಂಗಡಿ ಗ್ರಾ ಪಂ ಅಧ್ಯಕ್ಷೆ ಪೂರ್ಣಿಮ, ಉಪಾಧ್ಯಕ್ಷೆ ಚಂದ್ರಿಕಾ, ಕೆ ಸಾಹುಲ್ ಹಮೀದ್ ಕದಿಕೆ, ವಕೀಲ ರವೀಶ್ ಕಾಮತ್, ನಂದಾ ಪಾಯಸ್ ಮತ್ತಿತರರು ಉಪಸ್ಥಿತರಿದ್ದರು
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ನ್ಯಾಯಾಂಗ ಇಲಾಖೆಯ ಶಿರಸ್ತೆದಾರ ಪ್ರಕಾಶ್ ನಾಯಕ್, ವಕೀಲರಾದ ಶಿವರಾಜ್ ಪ್ರಸಾದ್ ಶೆಟ್ಟಿ ಎಮ್. ಹಿರಿಯ ಬ್ಯಾಂಕ್ ಪ್ರಬಂಧ ಸುಬ್ರಾಯ ಪ್ರಭು ಕಾನೂನು ಮಾಹಿತಿ ನೀಡಿದರು
ಸಿ.ಎಸ್.ಐ ಚರ್ಚು ಬೊಲ್ನ ದ ಹರಿಣಿ ಸುಶಾಂತಿ ಬಂಗೇರ ಸ್ವಾಗತಿಸಿದರು, ಪ್ರಸನ್ನಿ ಧನ್ಯವಾದ ಅರ್ಪಿಸಿದರು
ರೇಶ್ಚಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು
ಕಾರ್ಯಕ್ರಮದ ಪೂರ್ವಭಾವಿಯಾಗಿ ಶಾಂತಿಗಾಗಿ ಕಾಲುನಡಿಗೆ ಜಾಥಾ ವನ್ನು ರಾಹುಲ್ ಕರ್ಕಡ ಹಾಗೂ ಜಯಪ್ರಕಾಶ್ ಸೈಮನ್ ರವರು ಚಾಲನೆ ನೀಡಿದರು
Kshetra Samachara
20/12/2025 08:46 pm