ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆ ಹಾಗೂ ಪಾದಚಾರಿ ಮಾರ್ಗ ಸ್ವಚ್ಛತೆ ಗುರಿ - ರಾಜೇಂದ್ರ ಚೋಳನ್

ಬೆಂಗಳೂರು:ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡುವ ದೃಷ್ಟಿಯಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಸಾಮೂಹಿಕ ಸ್ವಚ್ಛತೆ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಮುಂದುವರೆದು, ಮಾನ್ಯ ಉಪಮುಖ್ಯಮಂತ್ರಿಗಳ ಸೂಚನೆಯಂತೆ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ, ನಗರದ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸ್ಥಳ ತಪಾಸಣೆಗಳನ್ನು ನಡೆಸಿ, ಅಧಿಕಾರಿಗಳಿಗೆ ಸ್ವಚ್ಛತಾ ಕಾರ್ಯಗಳನ್ನು ನಡೆಸಲು ಸೂಚಿಸಲಾಗಿದೆ.

ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಪ್ರಸ್ತುತ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಸುಮಾರು 110 ಕಿ.ಮೀ. ವಿಸ್ತೀರ್ಣದ ರಸ್ತೆ ಹಾಗೂ ಪಾದಚಾರಿ ಮಾರ್ಗ ಸ್ವಚ್ಛತೆ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ರವರು ತಿಳಿಸಿದರು.ಈ ಸಂದರ್ಭದಲ್ಲಿ ಚಿಕ್ಕಪೇಟೆ ವಿಭಾಗದಿಂದ ಕಾರ್ಪೋರೇಷನ್ ವೃತ್ತ, ಲಾಲ್ ಬಾಗ್ ರಸ್ತೆ, ಸುಬ್ಬಯ್ಯ ಸರ್ಕಲ್, ಮಿಷನ್ ರಸ್ತೆಗಳಲ್ಲಿ, ಶಾಂತಿನಗರ ವಿಭಾಗದಿಂದ ವಾರ್ಡ್-114 ರ ಗೌತಮಪುರದಲ್ಲಿ, ಗಾಂಧಿನಗರ ಕ್ಷೇತ್ರದ ನೆಹರುನಗರ, ರಾಮಚಂದ್ರ ರಸ್ತೆಯಲ್ಲಿ, ಸಿ.ವಿ. ರಾಮನ್ ನಗರದ, ಕಸ್ತೂರಿನಗರದ 1 & 2ನೇ ಮುಖ್ಯ ರಸ್ತೆಗಳಲ್ಲಿ, ಸಾಮೂಹಿಕ ಸ್ವಚ್ಛತೆ ಕಾರ್ಯ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಪಾದಚಾರಿ ಮಾರ್ಗದ ಸ್ಲ್ಯಾಬ್ ಅಳವಡಿಕೆ, ಅನುಪಯುಕ್ತ ಪೀಠೋಪಕರಣಗಳು, ವಾರಸುದಾರರಿಲ್ಲದ ಪೆಟ್ಟಿ ಅಂಗಡಿಗಳು, ತಳ್ಳುವ ಗಾಡಿಗಳು, ಕಟ್ಟಡ ತ್ಯಾಜ್ಯ, ಅನಧಿಕೃತ ಕೇಬಲ್ ತೆರವು, ಬ್ಲ್ಯಾಕ್ ಸ್ಪಾಟ್ ಗಳ ತೆರವುಗೊಳಿಸಲಾಯಿತು.

Edited By : Nagaraj Tulugeri
Kshetra Samachara

Kshetra Samachara

20/12/2025 08:55 pm

Cinque Terre

132

Cinque Terre

0