ಬೆಂಗಳೂರು: ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡಿಯಿಂದಾಗಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಮೃತ ಸವಾರನ ಮೇಲೆನೇ FIR ದಾಖಲಾಗಿರೋದು ಬೆಳಕಿಗೆ ಬಂದಿದೆ. ಇನ್ನೊಂದು ಬೈಕ್ ಸವಾರ ಅರವಿಂದ್ ನೀಡಿದ ದೂರಿನಡಿ FIR ದಾಖಲಾಗಿದೆ. ಇದರಿಂದ ಮೃತನ ಕುಟುಂಬಸ್ಥರು ಸಿಟ್ಟಾಗಿದ್ದು, ಗುಂಡಿ ಮುಚ್ಚದ ನಗರಸಭೆ ವಿರುದ್ಧ FIR ದಾಖಲಿಸುವ ಬದಲು, ತಬ್ರೇಜ್ ಮೇಲೆ ಮಾಡಿದ್ದಾರೆ. ತಬ್ರೇಜ್ ಸಾವಿಗೆ ನ್ಯಾಯ ಸಿಗೋ ತನಕ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಡಲ್ಲವೆಂದು ಪಟ್ಟು ಬಿಗಿಗೊಳಿಸಿದ್ದಾರೆ.
PublicNext
21/12/2025 11:19 am
LOADING...