ಬೆಂಗಳೂರು : ಕಾಟನ್ ಪೇಟೆ ಪೊಲೀಸ್ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಿಂದಾಗಿ ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದಾರೆ.
ಕಳೆದ ಆರು-ಎಂಟು ತಿಂಗಳಿನಿಂದಲೂ ಈ ರಸ್ತೆಯಲ್ಲಿ ಸಂಚರಿಸುವವರಿಗೆ ನಿತ್ಯ ನರಕಯಾತನೆ ತಪ್ಪಿಲ್ಲ. ರಸ್ತೆಯಲ್ಲಿ ಉಂಟಾಗಿರುವ ಈ ಅದ್ವಾನದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಬಿಎ ಹಾಗೂ BWSSB ಯಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಗೆದು ಹಿನ್ನೆಲೆ ವಾಹನಗಳ ಓಡಾಟಕ್ಕೆ ಹಿಂಸೆಯಾಗ್ತಿದೆ.
ಪಾದಚಾರಿ ಮಾರ್ಗಗಳನ್ನೂ ಅಗೆದಿರುವುದರಿಂದ, ಹಾಳಾದ ರಸ್ತೆಯಲ್ಲಿ ಬೈಕ್ ಸವಾರರೊಬ್ಬರು ಬಿದ್ದು ಕೈ ಮತ್ತು ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ಮತ್ತೊಬ್ಬ ಪಾದಚಾರಿಯೊಬ್ಬರು ಫುಟ್‌ಪಾತ್‌ನಿಂದ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
20/12/2025 10:08 pm
LOADING...