ಆನೇಕಲ್: ಭೂಮಿ ರೇಟ್ ಯಾವಾಗ ಗಗನಕ್ಕೇರಿದೆಯೋ ಆಗ ಸಂಬಂಧಿಕರಿಗೆ ಬೆಲೆಯೇ ಇಲ್ಲದಂತಾಗಿದೆ. ʼಹುಟ್ಟುತ್ತಾ ಅಣ್ತಮ್ಮಂದಿರು... ಬೆಳೀತಾ ದಾಯಾದಿಗಳುʼ ಎಂಬ ಒಂದು ಗಾದೆ ಮಾತಿದೆ. ಆಸ್ತಿ ಅಂತ ಬಂದ್ರೆ ಸಾಕು ಅಣ್ತಮ್ಮಂದಿರೂ ಮಚ್ಚು ದೊಣ್ಣೆ ಹಿಡ್ಕೊಂಡು ಗಲಾಟೆ ಮಾಡುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೋರ್ಟು- ಪೊಲೀಸು, ಕಚೇರಿ ಅಂತ ಹೋಗಿ ಬಡಿದಾಡಿಕೊಳ್ಳುತ್ತಾರೆ.
ಇಲ್ಲೊಂದು ಕಡೆ ಒಡಹುಟ್ಟಿದ ಅಕ್ಕನಿಂದಲೇ ನಕಲಿ ವಂಶವೃಕ್ಷವನ್ನು ಮಾಡಿ ತಮ್ಮನಿಗೆ ವಂಚನೆ ಮಾಡಿರುವ ಘಟನೆ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂಸೆನೂರು ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಮಹೇಶ್ ಎಂಬಾತ ಮೋಸಕ್ಕೆ ಒಳಗಾದ ವ್ಯಕ್ತಿ. ಮಹೇಶ್ ತಂದೆ ಸಿದ್ದಲಿಂಗಪ್ಪ ಅವರಿಗೆ ನಾಲ್ಕು ಜನ ಮಕ್ಕಳು. ಪುಷ್ಪಾ( 63), ಎರಡನೇ ಹೇಮಾವತಿ, ಮೂರನೇ ಮಹೇಶ್ ಹಾಗೂ ನಾಲ್ಕನೇ ಮಂಜುಳಾ ಮಕ್ಕಳಿದ್ದು ಪಿತ್ರಾರ್ಜಿತ ಆಸ್ತಿ ಇದಾಗಿದ್ದು ವ್ಯವಸಾಯ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದರು.
ಈ ನಡುವೆ ಅಕ್ಕ ಹೇಮಾವತಿ ಮತ್ತು ಭಾವ ಮಹಾದೇವಪ್ಪ ಇಬ್ಬರೂ ಸೇರಿಕೊಂಡು ನೋಸನೂರು ಗ್ರಾಮದ ಸರ್ವೆ ನಂಬರ್ 91/2 ರಲ್ಲಿ, 2ಎಕರೆ 16 ಗುಂಟೆ, ಸರ್ವೆ ನಂಬರ್ 41/2 ರಲ್ಲಿ 16 ಗುಂಟೆ, ಸರ್ವೆ ನಂಬರ್ 41/3 ರಲ್ಲಿ 3 ಗುಂಟೆ
ಜಮೀನನ್ನು ತಮ್ಮ ಮಹೇಶ್‌ಗೆ ತಿಳಿಯದ ಹಾಗೆ ನಕಲಿ ವಂಶವೃಕ್ಷ ಮಾಡಿ ಮುರಳಿ ರೆಡ್ಡಿ ಹಾಗೂ ಅಕಿರ ರೆಡ್ಡಿ ಎಂಬವರಿಗೆ ಮಾರಾಟ ಮಾಡಿದ್ದಾರೆ.
ಇನ್ನು ಈ ವಿಚಾರ ಮಹೇಶ್ ಗೆ ಮನೆ ಕಟ್ಟಲು ಲೋನ್ ಮಾಡಿಸಲು ಹೋಗಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಹಾರಗದ್ದೆ ಪಂಚಾಯಿತಿಗೆ ತಕರಾರು ಅರ್ಜಿಯನ್ನು ನೀಡಲಾಗಿತ್ತು. ಆದರೂ ಕೂಡ ಅಧಿಕಾರಿಗಳು ಹಣದಾಸೆಗೆ ಹೇಮಾವತಿ ಹಾಗೂ ಮಹದೇವಪ್ಪ ಜೊತೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಖಾತೆ ಮಾಡಿಸಿಕೊಟ್ಟಿದ್ದಾರೆ. ಹಾಗಾಗಿ ಅಧಿಕಾರಿಗಳ ವಿರುದ್ಧ ಮತ್ತು ಅಕ್ಕ ಹೇಮಾವತಿ ಹಾಗೂ ಭಾವ ಮಹಾದೇವಪ್ಪ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ. ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
20/12/2025 10:44 pm