ಸಕಲೇಶಪುರದಿಂದ ದೇವಾಲದಕೆರೆಗೆ ಕಾರ್ಯನಿಮಿತ್ತ ತೆರಳುತ್ತಿದ್ದ ಶಾಸಕರಾದ ಸಿಮೆಂಟ್ ಮಂಜುರವರು, ಮಾರ್ಗ ಮಧ್ಯೆ ಮಜಗಹಳ್ಳಿ ಸಮೀಪ ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಗಾಯಗೊಂಡ ಘಟನೆ ನಡೆದಿದೆ.
ಅಪಘಾತದ ಸ್ಥಳದಲ್ಲಿ ಸಿಮೆಂಟ್ ಮಂಜು ಅವರು ತಕ್ಷಣ ಸ್ಪಂದಿಸಿ, ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಮಾಡಿದರು. ಅವರ ಸಮಯೋಚಿತ ಕ್ರಮದಿಂದ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ದೊರೆಯುವಂತಾಯಿತು.
ಸ್ಥಳೀಯರು ಶಾಸಕ ಸಿಮೆಂಟ್ ಮಂಜು ಅವರ ಮಾನವೀಯ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಕಷ್ಟದ ಸಂದರ್ಭಗಳಲ್ಲಿ ಜನರ ಜೊತೆ ನಿಲ್ಲುವ ಅವರ ನಡೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
PublicNext
18/01/2026 04:12 pm
LOADING...