ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ಮರಳು ತುಂಬಬೇಡಿ ಎಂದಿದ್ದಕ್ಕೆ ರೈತನ ಮೇಲೆ ಹಲ್ಲೆ

ಶಿರಹಟ್ಟಿ: ನಮ್ಮ ಜಮೀನಿನ ಮುಂದೆ ಮರಳು ತುಂಬಬೇಡಿ ಎಂದಿದ್ದಕ್ಕೆ ಅಕ್ರಮ ಮರಳು ದಂಧೆಕೋರರು ರೈತನ ಮೇಲೆ ಹಲ್ಲೆ ಮಾಡಿದ್ದಾರೆ.

"ಶಿರಹಟ್ಟಿ ತಾಲೂಕಿನ ಕನಕವಾಡ ಗ್ರಾಮದಲ್ಲಿ ರವಿವಾರ ರಾತ್ರಿ ವೇಳೆಯಲ್ಲಿ ನಾನು ನನ್ನ ಜಮೀನಿಗೆ ನೀರು ಹಾಯಿಸಲು‌ ಹೋಗಿದ್ದೆ. ಕೆಳಗೆ ಹಳ್ಳದ ಕಡೆ ಮರಳು ತುಂಬುತ್ತಿರುವುದನ್ನು ಕಂಡು ಅಲ್ಲಿಗೆ ಹೋಗಿ ‌ಇಲ್ಲಿ ಮರಳು ತುಂಬಬೇಡಿ. ನಮ್ಮ ಜಮೀನು ಹಾಳಾಗುತ್ತದೆ ಎಂದು ಹೇಳಿದೆ. ಆಗ ಅವರೆಲ್ಲ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ" ಎಂದು ರೈತ ನಾಗರಾಜ ದೂರಿದ್ದಾರೆ.

ಆ ಸಮಯದಲ್ಲಿ ನಾನು ಮಾತನಾಡುವಾಗ ಹಿಂದಿನಿಂದ ಬಂದು ನನ್ನ ತಲೆಗೆ ಹೊಡೆದರು ಎಂದು ಗಾಯಾಳು ನಾಗರಾಜ ಹೇಳಿದರು. ಅಷ್ಟೇ ಅಲ್ಲದೆ, ನನ್ನ ಜೊತೆಗೆ ಇದ್ದ ಸಹೋದರ ಮಹೇಶನ‌ ಮೇಲೆಯೂ ಹಲ್ಲೆ ಮಾಡಿದ್ದಾರೆ ಎಂದರು.

Edited By :
PublicNext

PublicNext

20/01/2026 11:21 am

Cinque Terre

13.25 K

Cinque Terre

0

ಸಂಬಂಧಿತ ಸುದ್ದಿ