ಶಿರಹಟ್ಟಿ: ಮಕ್ಕಳ ಹೊಸ ಆಧಾರ್ ಕಾರ್ಡ್ ನೋಂದಣಿಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕ ಕೇವಲ 75 ರಿಂದ 125 ರೂಪಾಯಿ. ಆದರೆ, ಕಾಮನ್ ಸರ್ವೀಸ್ ಸೆಂಟರ್‌ಗಳು (CSC) ಈ ನಿಯಮಗಳನ್ನು ಗಾಳಿಗೆ ತೂರಿ, ಗ್ರಾಹಕರಿಂದ ಬರೋಬ್ಬರಿ 500 ರೂಪಾಯಿ ವಸೂಲಿ ಮಾಡಿ, ಹಗಲು ದರೋಡೆ' ನಡೆಸುತ್ತಿರುವ ಆರೋಪ ಕೇಳಿಬಂದಿದೆ.
ಈ ಅಕ್ರಮಕ್ಕೆ ತಾಜಾ ಉದಾಹರಣೆ ಎಂದ್ರೆ ಶಿರಹಟ್ಟಿ ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಎಸ್‌ಸಿ ಸೆಂಟರ್. ನಿನ್ನೆಯಷ್ಟೇ, ಈ ಕೇಂದ್ರದಲ್ಲಿ ಕೆಲಸ ಮಾಡುವ ಶ್ರೀಕಾಂತ್ ಎಂಬ ವ್ಯಕ್ತಿ, ಮಗುವಿನ ಹೊಸ ಆಧಾರ್ ಕಾರ್ಡ್ ಮಾಡಿಸಲು ಬಂದ ಹನುಮಂತ ಎಂಬ ಗ್ರಾಹಕರಿಂದ 500 ರೂಪಾಯಿ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಗ್ರಾಹಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಎಸ್‌ಸಿ ಸೆಂಟರ್‌ಗಳು ಈ ರೀತಿ ಗ್ರಾಹಕರಿಂದ ಅತಿಯಾದ ಹಣ ವಸೂಲಿ ಮಾಡುತ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲವೆಂದು ಸಾರ್ವಜನಿಕರ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ. ಇಂತಹ ಕೇಂದ್ರಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
22/01/2026 04:48 pm
LOADING...