ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸಮರ್ಪಕವಾಗಿ ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ

ಗದಗ: ಸಮರ್ಪಕವಾಗಿ ಬಸ್ ಇಲ್ಲದೇ ವಿದ್ಯಾರ್ಥಿಗಳು ಹಾಗೂ ಬಡ ರೋಗಿಗಳು ಪರದಾಡುತ್ತಿರುವ ಸ್ಥಿತಿ ಗದಗ ಹೊರವಲಯದ ಮಲಸಮುದ್ರದ ಜಿಲ್ಲಾಸ್ಪತ್ರೆ ಕ್ರಾಸ್ ನಲ್ಲಿ ನಡೆದಿದೆ.

ದಿನನಿತ್ಯವು ಸಮರ್ಪಕ ಬಸ್ ಇಲ್ಲದೇ ಬಸ್ ನಿಲ್ದಾಣದ ರಸ್ತೆ ಡಿವೈಡರ್ ಕೂತು ಬಸ್ಸಿಗಾಗಿ ಕಾಯೋ ಪರಿಸ್ಥಿತಿ ನಿರ್ಮಾಣವಾಗಿದ್ದು ಬಸ್‌ಗಾಗಿ ಗಂಟೆಗಟ್ಟಲೇ ಬಿಸಿಲಿನಲ್ಲಿ ಕಾಯೋ ಪರಿಸ್ಥಿತಿ ನಿರ್ಮಾಣವಾಗಿದೆ.

ಶಕ್ತಿ ಯೋಜನೆಯಿಂದ ಬಸ್ಗಳ ಸಂಖ್ಯೆ ವಿರಳವಾಗಿದ್ದು ಬಸ್‌ಗಳ ತುಂಬಾ ಪ್ರಯಾಣಿಕರನ್ನ ತುಂಬಿಕೊಂಡು ಹೋಗುವುದರಿಂದ ಇಲ್ಲಿ ಬಸ್ ನಿಲ್ಲುವುದಿಲ್ಲ ಅನಿವಾರ್ಯವಾಗಿ ರಸ್ತೆಯಲ್ಲೇ ಬಸ್ಸಿಗಾಗಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರ ಕೂಗಾಗಿದೆ ವಾಹನ ಸವಾರರು ಸ್ವಲ್ಪ ಎಡವಟ್ಟು ಮಾಡಿದರೆ ಈ ರಸ್ತೆಯಲ್ಲಿ ಅಪಾಯವಾಗುವುದು ಗ್ಯಾರಂಟಿ ಆರೋಗ್ಯ ವೈದ್ಯಕೀಯ ಶಿಕ್ಷಣ ಸಚಿವರು ತಮ್ಮ ರೋಗಿಗಳ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಸುರೇಶ ಎಸ್ ಲಮಾಣಿ ಪಬ್ಲಿಕ್ ನೆಕ್ಸ್ಟ್ ಗದಗ

Edited By :
PublicNext

PublicNext

23/01/2026 02:24 pm

Cinque Terre

16.7 K

Cinque Terre

0

ಸಂಬಂಧಿತ ಸುದ್ದಿ