ಗದಗ: ಹೊರಗಡೆಯಿಂದ ನೋಡಿದರೆ ಮನೆ. ಮನೆಯ ಒಳಗಡೆ ಹೋಗಿ ನೋಡಿದರೆ ಮನೆಯೊಳಗೊಂದು ಐತಿಹಾಸಿಕ ಚಾಲುಕ್ಯರ ಕಾಲದ ಪುರಾತನ ದೇವಸ್ಥಾನ ಪತ್ತೆ,
ನಾವು ಈಗ ಹೇಳುತ್ತಿರುವುದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮನೆಯೊಂದರ ಕಥೆಯಾಗಿದೆ. ಚೌಕಿಮಠ ಎನ್ನುವವರ ಮನೆಯ ಸಂಕೀರ್ಣದಲ್ಲಿ ಇರುವ ಈ ದೇವಸ್ಥಾನ, ಮನೆಯಲ್ಲೇ ಸುಮಾರು ಹತ್ತು ಅಡಿಯಷ್ಟು ಮುಚ್ಚಿಹೋಗಿದೆ. ಈ ದೇವಸ್ಥಾನವನ್ನು ನೋಡದ ಇತಿಹಾಸಕಾರರು ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಆವರಣದಲ್ಲಿ ವಾಸಿಸುವ ಚೌಕಿಮಠ ಕುಟುಂಬದವರು ಬಡವರಾಗಿದ್ದು ಸರ್ಕಾರ ಸೂಕ್ತ ಪರಿಹಾರ ಕೊಟ್ರೆ ಬಿಟ್ಟು ಕೊಡ್ತೀವಿ ಎಂದು ಕುಟುಂಬದವರು ಹೇಳಿದ್ದಾರೆ.
ವರದಿ: ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್, ಗದಗ
PublicNext
20/01/2026 08:11 pm
LOADING...