ಗದಗ: ಲಕ್ಕುಂಡಿಯಲ್ಲಿಯ ನಿಧಿಯನ್ನು ರಿತ್ತಿ ಕುಟುಂಬದವರು ಸರಕಾರಕ್ಕೆ ಕೊಟ್ಟು ಗೌರವವನ್ನು ಹೆಚ್ಚಿಸಿಕೊಂಡಿದ್ದಾರೆ. ರಿತ್ತಿ ಕುಟುಂಬಕ್ಕೆ ಸರಕಾರದಿಂದ ಏನೆಲ್ಲ ಸಿಗಬೇಕೋ ಅದು ಸಿಗುತ್ತದೆ. ಇದೇ ಜನವರಿ 26ನೇ ತಾರೀಕಿನಂದು ನಾವು ಎಲ್ಲರೂ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ ಎಂದು ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ. ಬಹಳಷ್ಟು ಜನರು ರಿತ್ತಿಯವರ ಕುಟುಂಬದವರಿಗೆ ಸರಕಾರಿ ಉದ್ಯೋಗ ಕೊಡಿ ಎಂದು ಸಲಹೆ ನೀಡುತ್ತಿರುವುದು ಕೇಳಿ ಬರುತ್ತಿದೆ. ಜನವರಿ 26ರಂದು ಜಿಲ್ಲಾಧಿಕಾರಿಯವರು ಹಾಗೂ ನಾವು ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
PublicNext
19/01/2026 07:35 pm
LOADING...