ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: "ಇಟ್ಟಿಗೇರೆಗೆ ತಡೆಗೋಡೆ ನಿರ್ಮಿಸಿ, ಪ್ರಾಣ ಉಳಿಸಿ"

ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೃದಯ ಭಾಗದಲ್ಲಿ ಇರುವ ಇಟ್ಟಿಗೇರೆಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಸಾರ್ವಜನಿಕರ ಕೂಗು ಜೋರಾಗಿದೆ.

ಗದಗ ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಲಕ್ಷ್ಮೇಶ್ವರ ಇಟ್ಟಿಗೇರೆಗೆ ತಡೆಗೋಡೆ ನಿರ್ಮಾಣ ಮಾಡಿ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ದಿನನಿತ್ಯವೂ ಇಟ್ಟಿಗೇರೆ ರಸ್ತೆಯ ಮೇಲೆ ಸಾವಿರಾರು ವಾಹನಗಳು ಓಡಾಟ ಮಾಡುತ್ತಿದ್ದು, ಚಾಲಕರು ಸ್ವಲ್ಪ ನಿಯಂತ್ರಣ ತಪ್ಪಿದರೆ ಸಾಕು, ವಾಹನಗಳು ಕಂದಕಕ್ಕೆ ಉರುಳುವುದು ಗ್ಯಾರಂಟಿ. ಆದ್ದರಿಂದ ತಡೆಗೋಡೆ ನಿರ್ಮಾಣ ಮಾಡಿದರೆ ಯಾವುದೇ ಪ್ರಾಣಹಾನಿ ಆಗುವುದಿಲ್ಲ. ಏನಾದರೂ ಅನಾಹುತವಾಗುವ ಮುನ್ನ ಇಟ್ಟಿಗೇರೆಗೆ ತಡೆಗೋಡೆ ನಿರ್ಮಾಣ ಮಾಡಿ ಜನರ ಪ್ರಾಣ ಉಳಿಸಿ... ಪುಣ್ಯ ಕಟ್ಟಿಕೊಳ್ಳಿ ಎಂಬುದು ಜನರ ಅಳಲು.

ಈ ಹಿಂದೆ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಇದನ್ನು ಮನಗಂಡು ಪರ್ಯಾಯವಾಗಿ ಮಧ್ಯದಲ್ಲಿ ಮಣ್ಣನ್ನು ಹಾಕಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದೇ ರೀತಿ ಇಟ್ಟಿಗೇರೆಯ ರಸ್ತೆಯ ಮೇಲೆ ಓಡಾಡುವ ವಾಹನಗಳಿಗೆ ಏನಾದರೂ ಅನಾಹುತವಾಗುವ ಮುಂಚೆಯೇ ತಡೆಗೋಡೆ ನಿರ್ಮಾಣ ಮಾಡಿ ಜನರ ಪ್ರಾಣ ಉಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-ಸುರೇಶ ಎಸ್. ಲಮಾಣಿ, ಪಬ್ಲಿಕ್‌ ನೆಕ್ಸ್ಟ್ ಗದಗ

Edited By : Shivu K
PublicNext

PublicNext

31/01/2026 07:32 pm

Cinque Terre

14.21 K

Cinque Terre

0

ಸಂಬಂಧಿತ ಸುದ್ದಿ