ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ

ಅಣ್ಣಿಗೇರಿ :ತಾಲೂಕಿನ ಶಲವಡಿ ಗ್ರಾಮದ ಶ್ರೀ ಗುರುಶಾಂತೇಶ್ವರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ(ರಿ) ದಿಂದ 1995-96 ನೇ ಸಾಲಿನ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಲಿಂಗರಾಜ ಸವದತ್ತಿ ತಿಳಿಸಿದರು.

ಅವರು ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಕಾರ್ಯಕ್ರಮವು ಜ 25 ರಂದು ಬೆಳಿಗ್ಗೆ 10-00 ಘಂಟೆಗೆ ತಾಲೂಕಿನ ಶ್ರೀ ಗುರುಶಾಂತೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ನಡೆಸಿದ 1995-96ನೇ ಸಾಲಿನ ವಿದ್ಯಾರ್ಥಿಗಳಿಂದ ಶಾಲೆಯ ಅವರಣದಲ್ಲಿ ಗುರುವಂದನ ಹಾಗೂ ಸ್ನೇಹ ಸಮ್ಮೇಳನದ ಕಾರ್ಯಕ್ರಮವು ನಡೆಯಲಿದೆ,

ಕಾರ್ಯಕ್ರಮಕ್ಕೆ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಶಲವಡಿಯ ವಿರಕ್ತಮಠದ ಗುರುಶಾಂತೇಶ್ವರ ಮಹಾಸ್ವಾಮಿಗಳು ಶಿಕ್ಷಕರು ಭಾಗವಹಿಸುವವರು ಎಂದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ರವೀಂದ್ರಬಾಬು ಅಂಗಡಿ, ಸದಸ್ಯರಾದ ಶಂಬು ನಾಗಠಾಣ, ಗುರುಶಾಂತಗೌಡ ಪಾಟೀಲ್, ವೀರಣ್ಣ ಕುಲಕರ್ಣಿ, ಶಿವಾನಂದ ಹಳ್ಳಿ, ನಾಗಲಿಂಗ ಪತ್ತಾರ ಇದ್ದರು.

Edited By : PublicNext Desk
Kshetra Samachara

Kshetra Samachara

23/01/2026 06:00 pm

Cinque Terre

5.17 K

Cinque Terre

0