ಧಾರವಾಡ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ಈ ವೇಳೆ ಗೋವುಗಳನ್ನು ಸಾಗಿಸಲು ಕುಮ್ಮಕ್ಕು ನೀಡಿದ ಗೋವು ಕಳ್ಳನೊಬ್ಬ ಬಜರಂಗದಳ ಕಾರ್ಯಕರ್ತನಿಗೆ ಫೋನಿನಲ್ಲಿ ಜೀವ ಬೆದರಿಕೆ ಹಾಕಿದ್ದಾನೆ.
ಹೌದು! ಧಾರವಾಡ ಬೈಪಾಸ್ ರಸ್ತೆ ಮೂಲಕ ಬೆಳಗಾವಿಯಿಂದ ಮೈಸೂರಿಗೆ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಮಾಹಿತಿ ಅರಿತ ಬಜರಂಗದಳ ಕಾರ್ಯಕರ್ತರು ತಡರಾತ್ರಿ ಆ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಅದರಲ್ಲಿ 40 ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ಈ ವೇಳೆ ಚಾಲಕನನ್ನು ವಿಚಾರಣೆ ಮಾಡಿದಾಗ ಆತ ಯಾರು ಗೋವುಗಳನ್ನು ಸಾಗಾಟ ಮಾಡಲು ಹೇಳಿದ್ದಾರೆ ಎಂಬ ಮಾಹಿತಿ ನೀಡಿದ್ದಾನೆ. ಆತನಿಗೆ ಚಾಲಕ ಕರೆ ಸಹ ಮಾಡಿಕೊಟ್ಟಿದ್ದಾನೆ. ಈ ವೇಳೆ ಬಜರಂಗದಳ ಮುಖಂಡನೊಂದಿಗೆ ಮಾತನಾಡಿದ ಆ ವ್ಯಕ್ತಿ, ವಾಹನವನ್ನು ಸುಮ್ಮನೆ ಬಿಡು ಇಲ್ಲದೇ ಹೋದರೆ ನಿನ್ನನ್ನು ಅಲ್ಲೇ ಬಂದು ಮರ್ಡರ್ ಮಾಡುತ್ತೇನೆ. ನಿನಗೆ ಏನು ಬೇಕೋ ಅದನ್ನು ಕೊಡುತ್ತಾರೆ. ಸುಮ್ಮನೆ ತೆಗೆದುಕೊಂಡು ವಾಹನ ಬಿಡು. ನನಗೆ ಕಾಂಗ್ರೆಸ್ ಎಂಎಲ್‌ಎ ಗೊತ್ತು ಎಂದು ಜೀವ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಖಡಕ್ ಆಗಿಯೇ ಉತ್ತರ ನೀಡಿರುವ ಬಜರಂಗದಳ ಮುಖಂಡ ಸಿದ್ದು ಹಿರೇಮಠ, ಇಂತಹ ಸಾಕಷ್ಟು ಜನರನ್ನು ನಾನು ನೋಡಿದ್ದೇನೆ. ನಿನಗೆ ಧಮ್ ಇದ್ದರೆ ಬಂದು ನನ್ನನ್ನು ಮರ್ಡರ್ ಮಾಡಿ ಎಂದಿದ್ದಾರೆ. ಸ್ಥಳಕ್ಕೆ ಉಪನಗರ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಗಂಗೇನಹಳ್ಳಿ ಕೂಡ ಭೇಟಿ ನೀಡಿದ್ದರು. ಅವರಿದ್ದ ಸಂದರ್ಭದಲ್ಲೇ ಆ ವ್ಯಕ್ತಿ ಫೋನ್ ಕರೆ ಮೂಲಕ ಸಿದ್ದು ಹಿರೇಮಠಗೆ ಧಮ್ಕಿ ಹಾಕಿದ್ದಾನೆ.
ಸದ್ಯ ಆ ವಾಹನಗಳನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಗೋವುಗಳನ್ನು ಗೋಶಾಲೆಗೆ ರವಾನಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/02/2026 02:51 pm
LOADING...