ಹುಬ್ಬಳ್ಳಿ: ಉತ್ತರ ಕರ್ನಾಟಕದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 36 ಕೋಟಿ ವೆಚ್ಚದಲ್ಲಿ 2002 ಹುಬ್ಬಳ್ಳಿಯಲ್ಲಿ ಬೃಹತ್ತಾದ ಐಟಿ ಪಾರ್ಕ್ ನಿರ್ಮಾಣ ಮಾಡಿದ್ದರು. ಆದರೆ ಯಾವುದೇ ರೀತಿಯ ನಿರ್ವಹಣೆ ಇಲ್ಲದೆ ಐಟಿ ಪಾರ್ಕ್ ಭೂತ ಬಂಗಲೆಯಾಗಿದೆ. ಇಲ್ಲಿ ಯಾವ ರೀತಿ ಅವ್ಯವಸ್ಥೆ ಇದೆ ನೀವೇ ನೋಡಿ...
ಹುಬ್ಬಳ್ಳಿ ಹೃದಯ ಭಾಗದಲ್ಲಿ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ನಿರ್ಮಿಸಿದ್ದರು. ನಿರುದ್ಯೋಗಿಗಳಿಗೆ ಆಶ್ರಯವಾಗಬೇಕಿತ್ತು. ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ, ಅಪ್‌ಡೇಟೆಡ್ ತರಬೇತಿ ನೀಡುವ ಕೇಂದ್ರವಾಗಬೇಕಿತ್ತು. ಆದರೆ ಅಂತಹ ಯಾವ ಸೌಲಭ್ಯ, ಸೇವೆಗಳೂ ಇಲ್ಲಿ ಇಲ್ಲದೆ ಮರೀಚಿಕೆಯಾಗಿವೆ. ಇದು ಒಂದು ಕಡೆಯಾದರೆ ಈ ಐಟಿ ಪಾರ್ಕ್ ಒಳಗೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೆ ಕತ್ತಲೋ ಕತ್ತಲು ಆಗಿದೆ. ಕಟ್ಟಡದ ಮೂಲೆ- ಮೂಲೆಗಳು ಬಿರುಕು ಬಿಟ್ಟಿವೆ. ಫ್ಲೈ ಓವರ್ ಕಾಮಗಾರಿಯಿಂದ ಎಲ್ಲೆಂದರಲ್ಲಿ ಕಸ, ಧೂಳು ಹಿಡಿದಿದೆ. ಕಬ್ಬು ವಾಸನೆಯಲ್ಲಿ ಶೌಚಾಲಯಗಳು ಇವೆ,
ಇನ್ನು 36 ಕೋಟಿ ರೂ. ವೆಚ್ಚದಲ್ಲಿ 2002ರ ಸೆಪ್ಟೆಂಬರ್ 17ರಂದು ಇಂದಿರಾ ಗ್ಲಾಸ್‌ಹೌಸ್ ಎದುರು ಹುಬ್ಬಳ್ಳಿ ಐಟಿ ಪಾರ್ಕ್ ನಿರ್ಮಿಸಲಾಗಿದೆ. ಈಗ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ, ಟಾಟಾ ಟಿಸಿಎಸ್, ಸ್ಟಾರ್ಟ್ ಅಪ್ ಸಂಸ್ಥೆಗಳು, ಪಾಸ್‌ಪೋರ್ಟ್ ಕಚೇರಿ ಸೇರಿ ಹಲವು ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಐಟಿ ಪಾರ್ಕ್ ಸರಿಯಾದ ನಿರ್ವಹಣೆ ಇಲ್ಲದೆ ಬಿಕೋ ಎನ್ನುತ್ತಿದೆ. ಸರ್ಕಾರ ಇತ್ತ ಗಮನಿಸಿ ಉತ್ತರ ಕರ್ನಾಟಕ ಭಾಗದಲ್ಲಿರುವ ಇದೊಂದು ಐಟಿ ಪಾರ್ಕನ್ನು ಉಳಿಸಿಕೊಳ್ಳಬೇಕಾಗಿದೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/02/2026 01:28 pm
LOADING...