ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಮಂಗನ ಕಾಟಕ್ಕೆ ಬೇಸತ್ತ ಜನರು - ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ಕಲಘಟಗಿ : ಕಲಘಟಗಿ ಪಟ್ಟಣದ ವಿದ್ಯಾಗಿರಿಯಲ್ಲಿ ಮಂಗ ಒಂದು ಜನರಿಗೆ ಕಚ್ಚುತ್ತಿರುವ ಕಾರಣ ಇಂದು ಅಲ್ಲಿಯ ನಿವಾಸಿಗಳು ಆಕ್ರೋಶಗೊಂಡು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ಕೆಲವು ದಿನಗಳಿಂದ ಮಂಗ ಒಂದು ಮನೆ ಒಳಗಡೆ ನುಗ್ಗಿ ಮನೆಯಲ್ಲಿ ಇರುವಂತಹ ಜನರ ಮೇಲೆ ತೊಂದರೆ ಮಾಡುತ್ತ ಬಂದಿದ್ದು ಈಗ ಜನರಿಗೆ ಕಚ್ಚುತ್ತಿರುವ ಕಾರಣಕ್ಕೆ ಜನರು ಗಾಬರಿಗೊಂಡಿದ್ದಾರೆ.

ಮಂಗನ ಕಾಟಕ್ಕೆ ಬೇಸತ್ತ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರು ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಮಂಗನನ್ನು ಹಿಡಿಯಲು ಮುಂದಾಗಿಲ್ಲ ಆದ್ದರಿಂದ ಬೇಸತ್ತ ಅಲ್ಲಿಯ ನಿವಾಸಿಗಳು ಇಂದು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದ್ದಾರೆ.

ಮಂಗನಿಂದ ಕಚ್ಚಿಸಿಕೊಂಡ ಜನರು ಆಸ್ಪತ್ರೆಗೆ ಓಡಾಡುವಂತಹ ಸ್ಥಿತಿ ಬಂದೊದಗಿದ್ದು ಮನೆಯಿಂದ ಹೊರಗಡೆ ಹೋಗಲು ಭಯ ಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಮಂಗನನ್ನು ಸೆರೆ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Manjunath H D
Kshetra Samachara

Kshetra Samachara

04/02/2026 07:38 am

Cinque Terre

3.76 K

Cinque Terre

0

ಸಂಬಂಧಿತ ಸುದ್ದಿ