ಧಾರವಾಡ: ಉತ್ತರ ಕರ್ನಾಟಕ ಭಾಗದ ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ದೊಡ್ಡ ಜಾತ್ರೆ ಎನಿಸಿಕೊಂಡಿರುವ ಧಾರವಾಡ ತಾಲೂಕಿನ ಗರಗ ಮಡಿವಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಧಾರವಾಡ ತಾಲೂಕಿನ ಹಲವೆಡೆ ಮದ್ಯ ಮಾರಾಟ ಬಂದ್ ಮಾಡಿ ಪ್ರಭಾರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಫೆಬ್ರವರಿ 4 ರಿಂದ 8 ರವರೆಗೆ ಅಂದರೆ ಐದು ದಿನಗಳ ಕಾಲ ಧಾರವಾಡ ತಾಲೂಕಿನ ಗರಗ, ಮುಮ್ಮಿಗಟ್ಟಿ, ಉಪ್ಪಿನ ಬೆಟಗೇರಿ, ಬೇಲೂರು ಹಾಗೂ ತೇಗೂರಿನಲ್ಲಿರುವ ಬಾರ್‌ಗಳನ್ನು ಮಾತ್ರ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.
ಫೆಬ್ರವರಿ 3 ರಂದು ರಾತ್ರಿ 11 ಗಂಟೆಗೆ ಬಂದ್ ಆಗುವ ಬಾರ್‌ಗಳು ಫೆಬ್ರವರಿ 9ರಂದೇ ತೆರೆಯಬೇಕು ಎಂದು ಆದೇಶಿಸಲಾಗಿದೆ. ಗರಗ ಮಡಿವಾಳೇಶ್ವರ ಜಾತ್ರೆಗೆ ಬೇರೆ ಬೇರೆ ಕಡೆಗಳಿಂದ ಜನ ಬರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ನಾಲ್ಕು ದಿನಗಳ ಕಾಲ ಅನೇಕ ಕಾರ್ಯಕ್ರಮಗಳು ನಡೆಯುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಹಳ್ಳಿಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Kshetra Samachara
03/02/2026 08:22 pm
LOADING...