ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ರೋಗಿಗಳು ಮತ್ತು ಅವರ ಕುಟುಂಬಸ್ಥರು ಅನುಭವಿಸುತ್ತಿದ್ದ ಸಂಕಷ್ಟದ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿ ಹೊರಬಂದ ಬಳಿಕ ಆಡಳಿತ ಮಂಡಳಿ ಎಚ್ಚೆತ್ತು ಕ್ರಮ ಕೈಗೊಂಡಿದೆ.
ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ವೀಲ್‌ಚೇರ್, ಸ್ಟ್ರೆಚರ್‌ಗಳ ಕೊರತೆಯಿಂದ ರೋಗಿಗಳನ್ನು ಕುಟುಂಬಸ್ಥರೇ ಎತ್ತಿಕೊಂಡು ಸಾಗಿಸುತ್ತಿದ್ದ ಅಮಾನವೀಯ ದೃಶ್ಯಗಳು ಬೆಳಕಿಗೆ ಬಂದಿದ್ದವು. ಕೆಲವು ರೋಗಿಗಳನ್ನು ರಸ್ತೆ ಬದಿಯಲ್ಲೇ ಕೂರಿಸಿ ವಾಹನಕ್ಕಾಗಿ ಕಾಯುತ್ತಿರುವ ಸ್ಥಿತಿಯೂ ಕಂಡುಬಂದಿತ್ತು. ಸಿಬ್ಬಂದಿ ಕೊರತೆ ಹಾಗೂ ಅಗತ್ಯ ಸೌಲಭ್ಯಗಳ ಅಭಾವದಿಂದ ಗ್ರಾಮೀಣ ಭಾಗಗಳಿಂದ ಆಗಮಿಸಿದ ರೋಗಿಗಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದರು.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ಪ್ರಸಾರವಾದ ನಂತರ ಕಿಮ್ಸ್ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಪ್ರತಿ ರೋಗಿಗೆ ವೀಲ್‌ಚೇರ್ ಮತ್ತು ಸ್ಟ್ರೆಚರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ರೋಗಿಗಳನ್ನು ಸುರಕ್ಷಿತವಾಗಿ ವಾಹನಕ್ಕೆ ಏರಿಸುವ ವ್ಯವಸ್ಥೆಯನ್ನು ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ.
ಕ್ರಮ ಕೈಗೊಂಡ ಹಿನ್ನೆಲೆ ರೋಗಿಗಳು ಹಾಗೂ ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಬ್ಯೂರೋ ರಿಪೋರ್ಟ್, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/02/2026 02:14 pm
LOADING...