ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಬಿಗ್ ಇಂಪ್ಯಾಕ್ಟ್ ಸ್ಟೋರಿ. ಮಳೆ ನೀರು ಬಂದರೇ ಸಾಕು ಬಿತ್ತಿ ಬೆಳೆಯುವ ರೈತ ಸಮುದಾಯದ ಕಣ್ಣಲ್ಲಿ ಖುಷಿ ನೆಲೆಸಬೇಕಿತ್ತು. ಆದ್ರೆ ಅಲ್ಲಿನ ರೈತರಿಗೆ ಮಳೆ ಬಂದು ಹಳ್ಳ ತುಂಬಿದರೇ ಕಣ್ಣೀರು ಬರುತ್ತಿತ್ತು.
ಆ ಹಳ್ಳ ರೈತ ಸಮುದಾಯಕ್ಕೆ ಎಷ್ಟು ಅನುಕೂಲವಾಗಿದೆಯೋ ಗೊತ್ತಿಲ್ಲ. ಆದ್ರೆ ಮಳೆಗಾಲದಲ್ಲಿ ದೊಡ್ಡ ಅನಾನುಕೂಲವಂತೂ ಮಾಡಿಯೇ ಹೋಗುತ್ತಿತ್ತು.
ನೆಮ್ಮದಿ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಪ್ರವಾಹದ ಭೀತಿ ಜನರನ್ನು ಹೈರಾಣಾಗಿಸುತ್ತಿತ್ತು. ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತ ಸರ್ಕಾರ ಆ ಹಳ್ಳದ ಸಮಸ್ಯೆಗೆ ತಾರ್ಕಿಕ ಅಂತ್ಯ ಕಲ್ಪಿಸಿದೆ.
ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಬೆಣ್ಣೆಹಳ್ಳ. ಇದೇ ಬೆಣ್ಣೆಹಳ್ಳದ ಯೋಜನೆಗೆ ಮೊದಲನೇ ಹಂತದಲ್ಲಿ ಸರ್ಕಾರ 200 ಕೋಟಿ ರೂಪಾಯಿ ಅನುದಾನದಲ್ಲಿ ಶಂಕುಸ್ಥಾಪನೆ ಮಾಡಲು ಮುಂದಾಗಿದೆ.
ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಬೆಣ್ಣೆ ಹಳ್ಳದ ಸಮಸ್ಯೆಗೆ ತಾರ್ಕಿಕ ಅಂತ್ಯ ಕಲ್ಪಿಸಿದೆ.
ಹೌದು.. ಇದೇ ಫೆ.8ರಂದು ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರತಿ ಸಾರಿ ಮಳೆಯಾದಾಗ ಧಾರವಾಡ ಜಿಲ್ಲೆಯ ಬೆಣ್ಣೆ ಹಳ್ಳದ ಪಾತ್ರದ ಜನರು ಪಡಬಾರದ ಕಷ್ಟ ಅನುಭವಿಸುತ್ತಿದ್ದರು.
ರೈತಾಪಿ ವರ್ಗಕ್ಕೆ ಈ ಹಳ್ಳ ಶಾಪವಾಗಿ ಪರಿಣಮಿಸಿತ್ತು. ಶಾಶ್ವತ ಪರಿಹಾರ ಒದಗಿಸಬೇಕೆಂದು ಹಲವು ವರ್ಷದಿಂದ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಜನರು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ನಾಲ್ಕೈದು ವರ್ಷವಂತೂ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ಗ್ರಾಮಗಳು ಮುಳುಗಡೆಯಾಗಿದ್ದವು.
ಸಾಕಷ್ಟು ಪ್ರಮಾಣ ಬೆಳೆಗಳಿಗೆ ಹಾನಿಯಾಗಿ ರೈತರು ಕಣ್ಣೀರಲ್ಲಿ ಕೈತೊಳೆದಿದ್ದರು. ಪ್ರವಾಹದಲ್ಲಿ ಸಿಲುಕಿ ಅನೇಕರು ಪ್ರಾಣ ಬಿಟ್ಟಿದ್ದರು. ಪ್ರತಿವರ್ಷವೂ ಭರವಸೆಯ ಬಣ್ಣದ ಮಾತುಗಳನ್ನು ನಂಬುವ ರೈತ ಸಮುದಾಯ ಅಕ್ಷರಶಃ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು.
ಇನ್ನು ಬೆಣ್ಣೆ ಹಳ್ಳದ ಅನಾಹುತಗಳನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಿರಂತರವಾಗಿ ವಿಸ್ತೃತವಾದ ವರದಿ ಮಾಡಿತ್ತು. ಇಲ್ಲಿನ ಜನರ ಸಮಸ್ಯೆಗಳನ್ನ ಎಳೆಎಳೆಯಾಗಿ ರಾಜ್ಯದ ಜನರ ಮುಂದೆ ಬಿಚ್ಚಿಟ್ಟಿತ್ತು.
ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತ ಸಿದ್ದರಾಮಯ್ಯನವರ ಸರ್ಕಾರ 200 ಕೋಟಿ ರೂಪಾಯಿ ಅನುದಾನದಲ್ಲಿ ಶಂಕುಸ್ಥಾಪನೆ ಮಾಡಲು ಮುಂದಾಗಿದೆ. ಆದಷ್ಟು ಬೇಗ ಪ್ರವಾಹ ಪೀಡಿತ ಪ್ರದೇಶದಲ್ಲಿ ಹಳ್ಳ ಅಗಲೀಕರಣ ಮಾಡಿ ಗ್ರಾಮಗಳಿಗೆ ನೀರು ನುಗ್ಗದಂತೆ ತಡೆಯಲು ಮುಂದಾಗಬೇಕಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/02/2026 07:55 am