ಧಾರವಾಡ: ಫುಟ್‌ಪಾತ್ ಜಾಗವನ್ನು ಅತಿಕ್ರಮಿಸಿ ಅಲ್ಲಿ ನಿಲ್ಲಿಸಲಾಗಿದ್ದ ದುರಸ್ತಿಯಲ್ಲಿದ್ದ ಓಲಾ ಬೈಕ್‌ಗಳನ್ನು ಧಾರವಾಡ ಸಂಚಾರ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ.
ಧಾರವಾಡದ ಜ್ಯುಬಿಲಿ ವೃತ್ತದ ಬಳಿ ಓಲಾ ಶೋ ರೂಮ್ ಇದೆ. ಇಲ್ಲಿಗೆ ದುರಸ್ತಿಯಲ್ಲಿರುವ ಬೈಕ್‌ಗಳನ್ನು ತರಲಾಗುತ್ತದೆ. ದುರಸ್ತಿಗೊಳಗಾದ ಬೈಕ್‌ಗಳನ್ನು ಶೋ ರೂಮ್‌ನವರು ಫುಟ್‌ಪಾತ್ ಮೇಲೆಯೇ ನಿಲ್ಲಿಸಿದ್ದರು. ಸಂಚಾರ ಠಾಣೆಯವರು ಫುಟ್‌ಪಾತ್ ಮೇಲೆ ಬೈಕ್ ನಿಲ್ಲಿಸಬೇಡಿ ಎಂದು ಶೋ ರೂಮ್‌ನವರಿಗೆ ಅನೇಕ ಸಾರಿ ಹೇಳಿದ್ದರೂ ಅವರು ಬೈಕ್‌ಗಳನ್ನು ತೆರವುಗೊಳಿಸಿರಲಿಲ್ಲ.
ಮಂಗಳವಾರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ ಮೇಟಿ ಅವರು ಫುಟ್‌ಪಾತ್ ಮೇಲೆ ನಿಲ್ಲಿಸಿದ್ದ ಸುಮಾರು 19 ಓಲಾ ಬೈಕ್‌ಗಳನ್ನು ಸೀಜ್ ಮಾಡಿದ್ದಾರೆ. ಟಾಟಾ ಏಸ್ ವಾಹನ ತಂದು ಫುಟ್‌ಪಾತ್ ಮೇಲೆ ನಿಲ್ಲಿಸಿದ್ದ ಓಲಾ ಬೈಕ್‌ಗಳನ್ನು ಅದರಲ್ಲಿ ಹೊತ್ತೊಯ್ದಿದ್ದಾರೆ. ಅಷ್ಟೇ ಅಲ್ಲದೇ ಸಾರ್ವಜನಿಕರ ಸಂಚಾರಕ್ಕೆ ಆ ಜಾಗವನ್ನು ಸುಗಮಗೊಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/02/2026 03:22 pm
LOADING...