ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲೇ ಚಾಕು ಇರಿತ, ಏಳು ಜನ ಆರೋಪಿಗಳು ಅರೆಸ್ಟ್

ಹುಬ್ಬಳ್ಳಿ: ಗಾಂಜಾ ವಿಚಾರಕ್ಕಾಗಿ ಕಿಮ್ಸ್ ಆಸ್ಪತ್ರೆಯಲ್ಲೇ ಚಾಕು ಹಾಕಿದ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಏಳು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಹೌದು,,, ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೈಯದ್, ಹಸನ್ ನಾಯಕ್ ಮತ್ತು ಹಜರೆಸಾಬ ಎಂಬ ವ್ಯಕ್ತಿಗಳು ಪರಸ್ಪರ ಜಗಳ ಮಾಡಿಕೊಂಡಿದ್ದರ ಬಗ್ಗೆ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ಪ್ರಕರಣಗಳು ದಾಖಲಾಗಿದೆ. ಹಲ್ಲೆ ಆಗಿದ್ದ ವ್ಯಕ್ತಿಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ, ಸೈಯದ್ ಎಂಬಾತನಿಗೆ ಹಸನ್ ನಾಯಕ್ ಎಂಬಾತನು ತನ್ನ ಸಹಚಾರರನ್ನು ಕರೆದುಕೊಂಡು ಬಂದು ಕಿಮ್ಸ್ ಆಸ್ಪತ್ರೆಯಲ್ಲೇ ಚಾಕು ಹಾಕಿ ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಸೋನು ಪಠಾಣ್, ಅಫ್ತಾಬ್ ಪಠಾಣ್, ಹಸನ ನಾಯಕ್, ಅಲ್ತಾಫ್ ಧಾರವಾಡ, ಮಲ್ಲಿಕ ರಿಹಾನ ತಾಡಪತ್ರಿ, ಖಾಜಾ ದದೇಸೂರ, ಇಬ್ರಾಹಿಂ ಅಜಾನ ಸೌದಾಗರ ಬಂಧಿತರು. ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ..

ಈರಣ್ಣ ವಾಲಿಕಾರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2026 03:42 pm

Cinque Terre

64.75 K

Cinque Terre

2

ಸಂಬಂಧಿತ ಸುದ್ದಿ