ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಂಬಾರಿನಲ್ಲಿ ನುಸಿ - ಬಿಸಿ ಊಟ ಬಿಟ್ಟ ವಿದ್ಯಾರ್ಥಿಗಳು, ಪಾಲಕರ ಆಕ್ರೋಶ!

ಹುಬ್ಬಳ್ಳಿ: ಮಧ್ಯಾಹ್ನ ಬಿಸಿ ಊಟದ ಸಾಂಬಾರಿನಲ್ಲಿ ನುಸಿ ಕಂಡುಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಊಟ ಬಿಟ್ಟು ಮನೆಗೆ ತೆರಳಿದ ಘಟನೆ ತಾರಿಹಾಳದಲ್ಲಿ ಸೋಮವಾರ ನಡೆದಿದೆ.

ತಾರಿಹಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಸಗಿ ಸಂಸ್ಥೆಯೊಂದು ಪೂರೈಕೆ ಮಾಡಿದ್ದ ಮಧ್ಯಾಹ್ನದ ಬಿಸಿ ಊಟದಲ್ಲಿ ನುಸಿ ಕಾಣಿಸಿಕೊಂಡಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಸಾಂಬಾರಿನಲ್ಲಿ ನುಸಿ ಕಂಡ ವಿದ್ಯಾರ್ಥಿಗಳು ಊಟ ಮಾಡದೆ ಬಿಟ್ಟಿದ್ದು, ಕೆಲವರು ಮನೆಗೆ ತೆರಳಿ ಊಟ ಮಾಡಿ ಮರು ಶಾಲೆಗೆ ಬಂದಿದ್ದಾರೆ ಎನ್ನಲಾಗಿದೆ.

ತಾರಿಹಾಳ ಸೇರಿದಂತೆ ಸುತ್ತಮುತ್ತಲಿನ ವಿವಿಧ ಶಾಲೆಗಳಿಗೆ ಇದೇ ಸಂಸ್ಥೆ ಮಧ್ಯಾಹ್ನದ ಊಟ ಪೂರೈಕೆ ಮಾಡಿರುವುದಾಗಿ ತಿಳಿದುಬಂದಿದೆ. ಬಹುತೇಕ ಶಾಲೆಗಳಿಗೆ ಕಳುಹಿಸಿದ್ದ ಸಾಂಬಾರಿನಲ್ಲೂ ಇದೇ ಸಮಸ್ಯೆ ಕಂಡುಬಂದಿದೆ ಎಂಬ ಆರೋಪ ಕೇಳಿಬಂದಿದೆ.

ಘಟನೆಗೆ ಸಂಬಂಧಿಸಿ ಬಿಸಿ ಊಟ ಪೂರೈಕೆ ಮಾಡುತ್ತಿರುವ ಸಂಸ್ಥೆಯ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪಾಲಕರು ಒತ್ತಾಯಿಸಿದ್ದಾರೆ.

ಬ್ಯೂರೋ ರಿಪೋರ್ಟ್ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2026 08:16 pm

Cinque Terre

65.76 K

Cinque Terre

9

ಸಂಬಂಧಿತ ಸುದ್ದಿ