ಉಡುಪಿ: ಅಳ ಸಮುದ್ರ ಮೀನುಗಾರಿಕೆ ಎಂಬುದು ಒಂದು ರೀತಿಯಲ್ಲಿ ಲಾಟರಿ ಹೊಡೆದಂತೆ. ಯಾಕೆಂದರೆ ಲಕ್ಷಾಂತರ ರೂ.ಖರ್ಚು ಮಾಡಿ ತುಂಬ ದೂರದತನಕ ಮೀನುಗಾರಿಕೆಗೆ ಹೋದಾಗ ಕೆಲವೊಮ್ಮೆ ಮೀನೇ ಸಿಗದೆ ಮರಳುವುದುಂಟು. ಕೆಲವೊಮ್ಮೆ ಲಕ್ಷಾಂತರ ಮೌಲ್ಯದ ಮೀನುಗಳು ಬಲೆಗೆ ಬೀಳುವುದೂ ಉಂಟು! ಕರಾವಳಿಯಲ್ಲಿ ಬೋಟ್ ನಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದವರಿಗೆ ರಾಶಿ ರಾಶಿ ತೊರಕೆ ಮೀನು ನಿಕ್ಕಿದೆ ! ಸ್ಟಿಂಗ್ ರೇ ಎಂದು ಇಂಗ್ಲಿಷ್ ನಲ್ಲಿ ಕರೆಯಲ್ಪಡುವ ಈ ಮೀನು ಬಲು ರುಚಿಯೂ ಹೌದು.ಇದನ್ನೇ ಒಣಗಿಸಿ ಮಾರಾಟ ಮಾಡುವ ಉದ್ಯಮವೂ ಇದೆ.ಇಂತಹ ತೊರಕೆ ಮೀನುಗಳ ರಾಶಿ ಬಲೆಗೆ ಬಿದ್ದಾಗ ಮೀನುಗಾರರು ಸಹಜವಾಗಿಯೇ ಖುಷಿಯಾಗಿದ್ದಾರೆ.ಇದೀಗ ಅರಬ್ಬೀ ಸಮುದ್ರದ ಈ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
PublicNext
24/01/2026 04:57 pm
LOADING...