ಬಂಟ್ವಾಳ: ತಾಲೂಕಿನ ತುಂಬೆ ವಿಶ್ವಜ್ಯೋತಿ ಯುವಕ ಮಂಡಲ ಮತ್ತು ಮಾತೃ ಮಂಡಳಿ ಇದರ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂ ಅನುದಾನ ಮಂಜೂರಾತಿಯಾಗಿದೆ.
ಈ ಮಂಜೂರಾತಿ ಪತ್ರವನ್ನು ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಅವರು ಯುವಕ ಮಂಡಲದ ಅಧ್ಯಕ್ಷ ಪೂವಪ್ಪ ಪೂಜಾರಿ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೇಂದ್ರ ಒಕ್ಕೂಟದ ನಿಕಟಪೂರ್ವ ಪೂರ್ವ ಅಧ್ಯಕ್ಷ ಮಾಧವ ವಲವೂರು, ವಲಯದ ಮೇಲ್ವಿಚಾರಕಿ ಮಮತಾ, ಸೇವಾ ಪ್ರತಿನಿಧಿ ಅನಿತಾ, ಯುವಕ ಮಂಡಲ ಮತ್ತು ಮಾತೃ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
Kshetra Samachara
31/01/2026 05:52 pm
LOADING...