ಬ್ರಹ್ಮಾವರ: ಆದಿ ಶಂಕರಾಚಾರ್ಯರೀಗೆ ಅನ್ನ ಭಿಕ್ಷೆ ನೀಡಿದಭೂಗತ ಸಾನ್ನಿಧ್ಯದಲ್ಲಿ ನೆಲೆನಿಂತ ಕಜ್ಕೆ ಶ್ರೀ ಅನ್ನ ಪೂರ್ಣೇಶ್ವರೀ, ಗಣಪತಿ ಆದಿಶಂಕರಾಚಾರ್ಯರ ದೇವಸ್ಥಾನದಲ್ಲಿ ಜನವರಿ 30 ರಂದು ವಿಶ್ವಕರ್ಮ ಜಗದ್ಗುರು ಶ್ರೀ ಶಿವ ಸುಜ್ಞಾನತೀರ್ಥ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಪ್ರತಿಷ್ಠಾ ವರ್ಧಂತ್ಯುತ್ಸವಜರುಗಲಿದೆ.
ಮಧ್ಯಾಹ್ನ 12 ಗಂಟೆಗೆ ಶ್ರೀ ಗುರುಗಳ ಉಪಸ್ಥಿತಿಯಲ್ಲಿ ಜರುಗುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್‌ಪಾಲ ಸುವರ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ರಾಷ್ಟç ಪ್ರಶಸ್ತೀ ಪುರಸ್ಕೃತ ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ, ಮುದ್ದೂರು ಗ್ರಾಮಪಂಚಾಯತಿ ಅಧ್ಯಕ್ಷೆ ಶೋಭಾ ಪೂಜಾರಿ ಮತ್ತು ಸ್ಥಳದಾನಿಗಳಾದ ಕೃಷ್ಣಯ್ಯ ಶೆಟ್ಟಿ, ಶ್ರೀಧರ ಕಾಮತ್ ಉಪಸ್ಥಿತರಿರುವರು .
ಅಂದು ಶ್ರೀಕ್ಷೇತ್ರದಲ್ಲಿ ಶ್ರೀ ಗುರುಗಳ ತುಲಾಭಾರ ಸೇವೆಯೊಂದಿಗೆ ತುಲಾಭಾರ ಸೇವೆ ಶ್ರೀಕ್ಷೇತ್ರದಲ್ಲಿ ಆರಂಭಗೊಳ್ಳಲಿದ್ದು ಭಕ್ತಾಧಿಗಳು ತುಲಾಭಾರ ಸೇವೆ ನೀಡುವವರು ಮತ್ತು ಪ್ರತಿಷ್ಠಾಪನೆ ಗೊಂಡ ದಿನದಿಂದ ಪ್ರತಿದಿನ ಅನ್ನದಾನ ನಡೆಯುತ್ತಿದ್ದು ನಾನಾ ಸೇವೆಗಳನ್ನು ಮಾಡಿಸುವವರು ಮತ್ತು ಆರ್ಥಿಕ ನೆರವು ನೀಡುವವರು ಶ್ರೀಕ್ಷೇತ್ರದ ವ್ಯವಸ್ಥಾಪಕರ ದೂರವಾಣಿ 9686034968 ಸಂಪರ್ಕಿಸಲು ಕೋರಲಾಗಿದೆ.
Kshetra Samachara
24/01/2026 05:25 pm
LOADING...