ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ ಮಹಿಳೆಯನ್ನು ಕೊಂದು, ಆತ್ಮಹತ್ಯೆಗೆ ಶರಣಾದ ʼಗೃಹಸ್ಥ!ʼ

ಚಿಕ್ಕಬಳ್ಳಾಪುರ: ಮಡದಿ, ಮಕ್ಕಳಿದ್ರೂ ಮತ್ತೊಬ್ಬರೊಂದಿಗೆ ಅಕ್ರಮ ಸಂಬಂಧ ಬೆಳೆಸಿ, ಕೊನೆಗೆ ಇಬ್ಬರೂ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ತಾನು ಮಾಡಿದ್ದು ಅಕ್ರಮ, ಅವಳು ಮತ್ತೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆಂಬ ಗುಮಾನಿಗೆ ಇಬ್ಬರ ಸಾವಾಗಿದೆ.

ಹೀಗೆ... ಒಬ್ಬರು ರಕ್ತಸಿಕ್ತವಾಗಿ ಬಿದ್ದಿದ್ರೆ, ಮತ್ತೊಬ್ಬರೂ‌ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡ್ತಿರುವ ದೃಶ್ಯ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ಪಟ್ಟಣದಲ್ಲಿ ನಡೆದಿದೆ. ಮದುವೆಯಾಗಿ ಮಕ್ಕಳಿರುವ ಸಲ್ಮಾ ಜೊತೆಗೆ ಮದುವೆಯಾಗಿ ಮೂವರು ಮಕ್ಕಳಿರುವ ಬಾಬಾಜಾನ್ ಅಕ್ರಮ ಸಂಬಂಧ ಬೆಳೆಸಿದ್ದ. ಕಳೆದ ಏಳೆಂಟು ವರ್ಷಗಳಿಂದ ಸಾಗಿದ್ದ ಅಕ್ರಮ ಸಂಬಂಧದಲ್ಲಿ ಮತ್ತೊಬ್ಬ ಎಂಟ್ರಿಯಾಗಿದ್ದಕ್ಕೆ ಪ್ರೇಮಿಗಳ ದುರಂತ ಸಾವಾಗಿದೆ.

ಚೇಳೂರು ಪಟ್ಟಣದ ಗೆರಿಗಿರೆಡ್ಡಿಪಾಳ್ಯ ಬಡಾವಣೆಯ ಸಲ್ಮಾ ಎಂಬುವರ ಜೊತೆಗೆ ಬಾಬಾಜಾನ್ ಏಳೆಂಟು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ. ಈ ಮಧ್ಯೆ ಸಲ್ಮಾ ಜೊತೆಗೆ ಮತ್ತೊಬ್ಬ ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಸಲ್ಮಾ ಜೊತೆಗೆ ಗಲಾಟೆ ಮಾಡಿದ ಬಾಬಾಜಾನ್ ಮಾರಕಾಸ್ತ್ರದಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ.

ಅವರ ಅಕ್ರಮದಿಂದ ಇವರು, ಇವರ ಅಕ್ರಮದಿಂದ ಅವರ ಸಾವಾಗಿದೆ ಎಂದು ಎರಡೂ ಕಡೆಯವರು ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟಿನಲ್ಲಿ ಇಬ್ಬರ ಸಾವಿಗೂ ಅಕ್ರಮ ಸಂಬಂಧ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಪೊಲೀಸರ ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

-ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ

Edited By : Shivu K
PublicNext

PublicNext

26/01/2026 06:59 pm

Cinque Terre

12.72 K

Cinque Terre

0

ಸಂಬಂಧಿತ ಸುದ್ದಿ