ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ರಾಜೀವ್ ಗೌಡ ಎರಡು ದಿನ ಪೊಲೀಸ್ ಕಸ್ಟಡಿಗೆ

ಶಿಡ್ಲಘಟ್ಟ : ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಮಿ ಹಾಕಿದ್ದ ಪ್ರಕರಣದ ಆರೋಪಿ, ರಾಜೀವ್ ಗೌಡನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನಗರದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಅವರಿದ್ದ ಪೀಠ ಬುಧವಾರ ಆದೇಶ ಹೊರಡಿಸಿದೆ.

ನಗರಸಭೆ ಪೌರಾಯುಕ್ತೆ ಜಿ. ಅಮೃತಾ ಅವರ ಪ್ರಕರಣ ದಾಖಲಾದ ಬಳಿಕ ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ, ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲು ನಡೆಸಿದ ಪ್ರಯತ್ನ ವಿಫಲವಾಗಿತ್ತು.

ಅಂತಿಮವಾಗಿ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೊಲೀಸರು ಕೇರಳ ಗಡಿಯಲ್ಲಿ ಕಾರ್ಯಾಚರಣೆ ನಡೆಸಿ ರಾಜೀವ್ ಗೌಡನನ್ನು ಬಂಧಿಸಿದ್ದರು. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಾಜೀವ್ ಗೌಡ ಪರವಾಗಿ ವಿವೇಕ್ ಸುಬ್ಬಾರೆಡ್ಡಿ ವಾದ ಮಾಡಿದರೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮೊಹಮ್ಮದ್ ಖಾಜಾ ಅವರು ಪ್ರತಿವಾದ ಮಂಡಿಸಿದರು. ವಾದ- ಪ್ರತಿವಾದ ಮುಗಿದ ನಂತರ ಅಂತಿಮವಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಿಎಸ್ ಸುಕನ್ಯಾ ಅವರಿದ್ದ ಪೀಠವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.

ಬುಧವಾರ ಪ್ರಕರಣದ ಕುರಿತು ವಾದ- ಪ್ರತಿವಾದ ಆಲಿಸಿದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಅವರಿದ್ದ ಪೀಠವು ಆದೇಶವನ್ನು ಕಾಯ್ದಿರಿಸಿತ್ತು. ಒಂದು ಗಂಟೆಯ ನಂತರ ತೀರ್ಪು ನೀಡಿ ರಾಜೀವ್ ಗೌಡನಿಗೆ ಎರಡು ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲು ಆದೇಶಿಸಿದರು.

Edited By :
PublicNext

PublicNext

28/01/2026 10:45 pm

Cinque Terre

19.41 K

Cinque Terre

0

ಸಂಬಂಧಿತ ಸುದ್ದಿ