ಡ್ಲಘಟ್ಟ : ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡಗೆ ಶಿಡ್ಲಘಟ್ಟ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ನಂತರ ಮಾತನಾಡಿದ ರಾಜೀವ್ ಗೌಡ, ನನ್ನ ಮೇಲೆ ರಾಜಕೀಯ ಪಿತೂರಿ ನಡೆಸಿ ನನ್ನನ್ನು ಜೈಲಿಗೆ ಕಳಿಸಿದ್ದಾರೆ. ಇಂತಹ ಸಣ್ಣ ಕೆಲಸಕ್ಕೆ ಇಷ್ಟೊಂದು ಮಾಡುವ ಅವಶ್ಯಕತೆ ಇರಲಿಲ್ಲ, ಆದರೂ ಇದು ಒಂದು ರಾಜಕೀಯ ಪಿತೂರಿ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ.
ದೇವರು ಅನ್ನುವವನು ದೊಡ್ಡವನು, ಭಗವಂತ ಮೇಲೆ ಎಲ್ಲಾ ನೋಡುತ್ತಿರುತ್ತಾರೆ ಅವರು ಮಾಡಿರುವ ಕರ್ಮ ಅವರೇ ಅನುಭವಿಸುತ್ತಾರೆ. ನಾನು ಪಡೆದಿರುವ ನೋವು ಖಂಡಿತ ಅವರು ಅಥವಾ ಅವರ ಮಕ್ಕಳು ಒಂದು ದಿನ ನೋವು ಅನುಭವಿಸುತ್ತಾರೆ.
ನಮ್ಮ ಶಿಡ್ಲಘಟ್ಟ ನನ್ನ ಕರ್ಮ ಭೂಮಿ ನನ್ನ ಶಿಡ್ಲಘಟ್ಟದ ಜನತೆಗೋಸ್ಕರ ನಾನು ಯಾವತ್ತೂ ಸತ್ಯದ ಪರವಾಗಿ ಹೋರಾಟ ಮಾಡುವುದಕ್ಕೆ ಸಿದ್ಧವಾಗಿರುತ್ತೇನೆ. ನನ್ನ ರಾಜಕೀಯ ಜೀವನದಲ್ಲಿ ನನ್ನ ಕ್ಷೇತ್ರದ ಜನತೆ ಹಾಗೂ ತಂದೆ ತಾಯಿ, ಕಾರ್ಯಕರ್ತರು ನನ್ನ ಬೆನ್ನೆಲುಬಾಗಿ ನಿಂತಿರುವ ಎಲ್ಲರೂ ಆಭಾರಿಯಾಗಿರುತ್ತೇನೆ.
ನನಗೆ ಯಾವುದೇ ಕಾರಣಕ್ಕೂ ಮೋಸದ ವಿಚಾರ ಆಗಲಿ, ಕೊಲೆ ಮಾಡಿರುವುದಾಗಲಿ, ದರೋಡೆ ಮಾಡಿರುವುದಾಗಲಿ, ಇಲ್ಲ ಲಂಚದ ಪ್ರಕರಣದಲ್ಲಿ ನೀವು ಜೈಲಿಗೆ ಹೋಗಿರುವುದಿಲ್ಲ. ಕಾರಣಾಂತರಗಳಿಂದ ಈ ದುರ್ಘಟನೆ ಆಗಿರಬಹುದು, ಆದರೂ ಕೂಡ ನಾವು ನಿಮ್ಮೊಟ್ಟಿಗೆ ಇದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಕಾರ್ಯಕರ್ತರೇ ನನ್ನ ಶಕ್ತಿ. ಶಿಡ್ಲಘಟ್ಟ ಜನತೆಗೆ ನ್ಯಾಯಕ್ಕಾಗಿ, ಸತ್ಯಕ್ಕಾಗಿ ಹೋರಾಟ ಮಾಡುತ್ತೇನೆ ಇದು ಕಾರಣಾಂತರಗಳಿಂದ ತೊಂದರೆ ಆಗಿರಬಹುದು ಆದರೂ ಕೂಡ ನಾನು ನ್ಯಾಯಕ್ಕೆ ತಲೆಬಾಗುತ್ತೇನೆ.
ಸತ್ಯಕ್ಕೆ ಗೌರವ ಕೊಡುತ್ತೇನೆ ಹಾಗಾಗಿ ಮುಂದಿನ ದಿನಗಳಲ್ಲಿ ನಮ್ಮ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಜನತೆಗೆ ಸತ್ಯ ಮತ್ತು ನ್ಯಾಯ ಸಿಗಬೇಕು ಅದಕ್ಕೆ ಹೋರಾಟ ಮಾಡುತ್ತೇನೆ. ಅದು ಕಾನೂನು ರೀತಿಯಾಗಿ ಹೋರಾಟ ಮಾಡುತ್ತೇನೆ,
ಆದರೆ ನನ್ನೊಟ್ಟಿಗೆ ಆತ್ಮಸ್ಥೈರ್ಯವನ್ನು ತುಂಬಿದಂತಹ ಎಲ್ಲಾ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ತಂದೆ ತಾಯಂದಿರು ಹಾಗೂ ಎಲ್ಲಾ ಮುಖಂಡರಿಗೂ ಶಿರಬಾಗಿ ನಮಸ್ಕರಿಸುತ್ತೇನೆ ನನ್ನ ಜೊತೆಯಲ್ಲಿ ಶಕ್ತಿಯಾಗಿ ಎಲ್ಲರೂ ಕೂಡ ನಾವಿದ್ದೇವೆ,
ನಿನಗೆ ಏನೇ ತೊಂದರೆ ಆದರೂ ಕೂಡ ನಾವು ಇದ್ದೇವೆ ಅನ್ನೋ ರೀತಿಯಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಎಲ್ಲರೂ ಕೂಡ ನನ್ನ ಬೆನ್ನೆಲುಬಾಗಿದ್ದಾರೆ ಎಲ್ಲರಿಗೂ ಆಭಾರಿಯಾಗಿರುತ್ತೇನೆ ಎಂದರು.
PublicNext
30/01/2026 10:42 pm