ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ : ರಾಜೀವ್ ಗೌಡ ವಿಚಾರಣಾ ಜಾಮೀನು ಜ.24 ಕ್ಕೆ ಮುಂದೂಡಿಕೆ

ಶಿಡ್ಲಘಟ್ಟ : ನಗರಸಭೆ ಪೌರಾಯುಕ್ತೆ ಅಮೃತ ಗೌಡಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಸಮಾಜ ಸೇವಕ ಹಾಗೂ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಪ್ರಕರಣದ ವಿಚಾರಣೆ ಜ. 24ಕ್ಕೆ ಮುಂದೂಡಲಾಗಿದೆ.

ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಚಿಂತಾಮಣಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು (ಬೇಲ್ ಪಿಟಿಷನ್)ಗೆ ಸಂಬಂಧಿಸಿದಂತೆ ನಡೆದ ವಾದ-ಪ್ರತಿವಾದದಲ್ಲಿ ರಾಜೀವ್‌ಗೌಡ ಪರ ಹಿರಿಯವಕೀಲ ವಿವೇಕ್‌ರೆಡ್ಡಿ ವಾದ ಮಂಡಿಸಿದರೆ, ಅಮೃತಗೌಡ ಪರ ಸರ್ಕಾರಿ ಅಭಿಯೋಜಕಿಯಾಗಿ ಸುಮತಿ ಶಾಂತ ಮೇರಿ ಅವರು ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇದೇ 24 ಕ್ಕೆ ಮುಂದೂಡಿದ್ದು ಆದೇಶಕ್ಕಾಗಿ ಕಾಯ್ದಿರಿಸಲಾಗಿದೆ.

ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ

Edited By :
PublicNext

PublicNext

23/01/2026 10:46 am

Cinque Terre

18.05 K

Cinque Terre

0

ಸಂಬಂಧಿತ ಸುದ್ದಿ