ಚಿಂತಾಮಣಿ : ರಸ್ತೆಯಲ್ಲಿ ಚಲಿಸುವ ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ಮೊಬೈಲ್, ನಗದು ಹಣ ದೋಚಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಪಲ್ಲಿ ಸಮೀಪ ಬುಧವಾರ ರಾತ್ರಿ ಸುಮಾರು 09 ಗಂಟೆಗೆ ನಡೆದಿದೆ.
ಚಿಂತಾಮಣಿ ತಾಲ್ಲೂಕಿನ ಉಪ್ಪಾರಪೇಟೆ ಗ್ರಾಮದ ರಿಹಾನ್ ಮತ್ತು ಉವೆಸ್ ಎಂಬ ಇಬ್ಬರು ವ್ಯಕ್ತಿಗಳು ಚಿಂತಾಮಣಿ ನಗರದ ವೆಂಕಟಗಿರಿ ಕೋಟೆಯಲ್ಲಿ ಚೀಟಿ ಹಣವನ್ನು ತೆಗೆದುಕೊಂಡು ತಮ್ಮ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಕೋನಪಲ್ಲಿ ಸಮೀಪದ ಮೋರಿ ಬಳಿ ನಾಲ್ಕು ಜನ ಖದೀಮರು ದ್ವಿಚಕ್ರ ವಾಹನ ಅಡ್ಡಗಟ್ಟಿ ಎರಡು ಮೊಬೈಲ್ ಹಾಗೂ ಏಳು ಸಾವಿರ ಹಣ, ಬೆಳ್ಳಿಯ ಚೈನು ಕಿತ್ತುಕೊಂಡು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಘಟನೆಯ ವಿಷಯ 112 ಪೊಲೀಸರಿಗೆ ಮುಟ್ಟಿಸಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಾಂತರ ಠಾಣೆಗೆ ದೂರು ನೀಡಿ ಎಂದು ಹೇಳಿ ವಾಪಸ್ ಹೋಗಿದ್ದಾರೆ.
ಇಂತಹ ಘಟನೆಗಳು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಬಹಳಷ್ಟು ಕಂಡು ಬರುತ್ತಿದ್ದು ಪೊಲೀಸರು ಕೂಡಲೇ ಇಂತಹ ಘಟನೆಗಳು ಮುಂದುವರಿಯದಂತೆ ಬ್ರೇಕ್ ಹಾಕಬೇಕಾಗಿದೆ ಸಾರ್ವಜನಿಕರ ಮಾತಾಗಿದೆ.
ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
29/01/2026 05:33 pm
LOADING...