ಬೇಲೂರು: ತಾಲ್ಲೂಕಿನ ಹಿರೇಹಾಸಡೆ ಗ್ರಾಮದ ರೈತರು ಕಾಡಾನೆಗಳ ದಾಳಿಗೆ ತತ್ತರಿಸಿ ಹೋಗಿದ್ದಾರೆ. ಸುಮಾರು 22 ರಿಂದ 28 ಆನೆಗಳಿರುವ ಬೃಹತ್ ಹಿಂಡು ಗ್ರಾಮದ ತೋಟಗಳಿಗೆ ನುಗ್ಗಿ ಬೆಳೆದು ನಿಂತಿದ್ದ ಅಡಿಕೆ ಮತ್ತು ಕಾಫಿ ಗಿಡಗಳನ್ನು ಧ್ವಂಸಗೊಳಿಸಿವೆ. ಕಳೆದ ಕೆಲವು ದಿನಗಳಿಂದ ಹಿರೇಹಾಸಡೆ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು, ರೈತ ಶರತ್ ಕುಮಾರ್ ಸಿ.ಜಿ. ಅವರಿಗೆ ಸೇರಿದ ತೋಟದ ಮೇಲೆ ದಾಳಿ ನಡೆಸಿವೆ.
ರಾತ್ರಿ ಹಾಗೂ ಹಗಲು ಎನ್ನದೆ ತೋಟದಲ್ಲಿ ಬೀಡುಬಿಟ್ಟಿರುವ ಆನೆಗಳು, ನೂರಾರು ಅಡಿಕೆ ಮರಗಳನ್ನು ಕಿತ್ತು ಹಾಕಿವೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಬೆಳೆ ಕೈಗೆ ಬರುವ ಸಮಯದಲ್ಲಿ ಮಣ್ಣುಪಾಲಾಗುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.
PublicNext
27/01/2026 10:01 pm
LOADING...